UNIVERSAL LIBRARY L)

OU 19858

AdVddl | IVSHAINN

ಸುಟೋಧ ಪಕಟನಾಲಯ ಬೆಂಗಳೊರು ನಗರ,

ಸುಬೋಧ ಕುಸುಮಾಂಜಲಿ ಗ್ರಂಥಮಾಲಾ (ಸಚಿತ್ರ ಮಾಸಪುಸ್ತಕಾವಳಿ)

ಭಾರತದೇಶದಲ್ಲಿ ಆದಿಕಾವ್ಯವೆಂದು ಸುಪ್ರಸಿದ್ಧವಾದ ಶ್ರೀ ರಾಮಾ ಯಂಣದ ಅತಿ ಮುಖ್ಯ ಕಥಾಸಾ ರವು "ಸುಬೋಧ ಕುಸುಮಾಂಬಲಿ ಗ್ರಂಥಮಾಲೆ'ಯ ಸುವ:ನೋಹೆರ ತಿಳಿಗನ್ನಡ ಶೈಲಿಯಲ್ಲಿ ಬರೆಯಲ್ಪಟ್ಟ ದೆ. ಕೆಪ್ಟಿಂಧಾ ಕಾಂಡದೊಂದಿಗೆ ಪೂರ್ತಿಯಾದ ೧ನೆಯ ಭಾಗವು ಸಿದ್ಧವಾಗಿದೆ. ಪುಟ ಸಂಖ್ಯೆ ೩೮೫. ಉತ್ತಮ ಪ್ರತಿ ೮. ೨--೦--0. ಸಾಮಾನ್ಯ ಪ್ರತಿ ೧-೮-೦, ಟಿ. ಖ. ಪ್ರತ್ಯೇಕ... ದಿನವೇ ತರಿಸಿಕೊಳ್ಳಿ.

ಸುಬೋಧ (ತಿಳಿಗನ್ನಡ ಸಚಿತ್ರಮಾಸಪತ್ರಿಕೆ) ಧಾರ್ಮಿಕ, ನೈತಿಕ, ಸಾಮಾಜಿಕ, ವಿದ್ಯಾನಿಷಯಕವಾದ ನಿವಿಧಲೇಖನ ಗಳು ಕರ್ಣಾಟಕದ ಸುಪ್ರಸಿದ್ಧ ಲೇಖಕರಿಂದ ಬರೆಯಲ್ಪಟ್ಟು ಪ್ರಕಟವಾಗು ವುವು. ರ್ಕ್ಸ್‌ ಕ್ವಾರ್ಬೋ ೬೦ ಪುಟಗಳು. ವಾ. ಚಂ. ನಾಲ್ಕು ರೂಪಾಯಿ ಮಾದರಿ ಪ್ರತಿ ೦--೬-- 0. (ನಿ. ಹಿ. ಮೂಲಕ ರೂ. ೪-೪-೦).

ನೆಗುವ - ನಂದ (ಹಾಸ್ಯರಸಪ್ರಧಾನವಾದ ಸಚಿತ್ರಮಾಸಪತ್ರಿಕೆ) ಮನೋರಂಜಕ ಲೇಖನ - ಕತೆ- ಕವಿತೆ ವ್ಯಂಗಚಿತ್ರಗಳನ್ನೊಳಗೊಂಡು ಜನಮನರಂಜನೆಯನ್ನುಂಟುಮಾಡುವ ಶ್ರೇಷ್ಠವರ್ಗದ ಸಚಿತ್ರಮಾಸಪತ್ರಿಕೆ. ಬಿಡಿ ಪ್ರತಿ ಒಂದಾಣೆ, ವಾ. ಚಂ. ಸ್ಥಳದಲ್ಲಿ ೧-೦-೦. ಪರಸ್ಕೃಳಕ್ಕೆ ಮ. ಆ. ಮೂಲಕ ೧-೦-೦. (ವಿ. ಹ. ಮೂಲಕ ೧-೪-೦).

| ಈೇರಾವು ಸಹಾಯಂ

ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

(ನವ ಕುಸುಮ ಮಾಲಾ) ಮುನ್ನುಡಿ: |

ಲೊಟಕದ ಮಾನವ ವರ್ಗದಲ್ಲಿ, ವಿಧೇಯತೆ, ಭ್ರ ತೃಪ್ರೇಮ, ನಿಸ್ಟಾ ರ್ಥಸೇವೆ, ಜಿತೇಂದ್ರಿಯತ್ವ ಮುಂತಾದ ಗುಣಗಳ ಚಟಾ ಮೂರ್ತಿ ದರೆ ನಮ್ಮ ಕಥಾನಾಯಕನಾದ ಸೌಮಿತ್ರಿಯೇ! ಮಹಾನುಭಾವನು, ತನ್ನ ಅಣ್ಣನಾದ ಶೀರಾಮನ ಸೇವೆಗಾಗಿಯೇ ಜನ್ಮನವೆತ್ತಿದವನೋ ವಿಂಬಂತೆ, ಒಂದು ಕಾರ್ಯಕ್ಕಾಗಿಯೇ ತನ್ನ ತನುಮನಧಸಗಳನ್ನೆ ಸಮರ್ಪಿಸಿ ಧನ್ಯತೆಯನ್ನು ಹೊಂದಿದನು. ಈತನ ಆದ್ಯಂತ ಜೀವಿತಕಾ ಲದಲ್ಲಿ, ತನಗಾಗಿ, ತನ್ನ ಸುಖಕ್ಕಾಗಿ, ಅಥವ ತನ್ನ ಹೆಂಡತಿ ಮಕ್ಕಳಿಗಾಗಿ ಎಂಬದಾಗಿ ಯಾವ ಸಂಗ್ರಹೆವನ್ನೂ ಮಾಡಿಕೊಂಡಂತೆ ಕಂಡುಬಾರದು, ಸೌಮಿತ್ರಿಯ ಜೀವಿತವೆಂದರೆ ಶೀ ಸೀತಾರಾಮರ ಸೇವೆಗಾಗಿ! ಹೀಗೆ ಕೇವಲ ನಿಸ್ವಾರ್ಥಸೇವಾಮಗ್ನರಾಗಿ ಜೀವಿಸಿದ ಮಾನವೋತ್ತಮರು ಲೋಕದ ಚರಿತ್ರೆಯಲ್ಲಿ ಬಹುಮಂದಿ ದೊರೆಯುವುದಿಲ್ಲ. ಅದುದರಿಂದ ಮಹನೀಯನ ಜೀವಿತ ರಹಸ್ಯವನ್ನು ತಿಳಿಯುವುದು ಅವಶ್ಯಕವಿದೆ...

ಸೌಮಿತ್ರಿಯೆಂದರೆ, ದಶರಥರಾಜನ ಪತ್ತಿ ಸುಮಿತ್ರೆಯ ಉದರಸಂ ಭೂತನಾದ ಲಕ್ಷ್ಮಣಸ್ವಾಮಿಯು. ಲಕ್ಷ್ಮ ಶ್ರೀರಾಮನ? ಮೆಚು ಗೆಯ ತಮ್ಮನು ; ಮಾತ್ರವಲ್ಲ-ವಿಧೇಯನಾ ಭಂಟನಾಗಿಯೂ ಇದ್ದನು. ಶೀರಾಮನೆಲ್ಲಿದ್ದರೆ ಅಲ್ಲಿ ಲಕ್ಷ್ಮಣಸಿಲ್ಲದಿಲ್ಲ. "ರಾಮ ಲಕ್ಷ್ಮಣರು' ಎಂಬ ಮಾತು ಒಂದೇ ಪದವೋ ಎಂಬಂತೆ ಉಪಯೋಗಿಸಲ್ಪಡುತ್ತಿದೆ. ಶ್ರೀರಾ ಮನ ಜನನಾರಭ್ಯ, ಸೌಮಿತ್ರಿಯು ಆತನ ಕಷ್ಟಗಳಲ್ಲಿ ದುಃಖಗಳಲ್ಲಿ, ಸುಖ-ಸಂತೋಷಗಳಲ್ಲಿ ದೇಹದ ನೆಳಲೋ ಎಂಬಂತೆ ಆತನನ್ನು ಅನುಸರಿ ಸಿಕೊಂಡಿದ್ದು ಸೇವೆಮಾಡಿದನು. ಶ್ರೀರಾಮನ ಸೇವೆಯಲ್ಲಿ ಅತನಿಗೆ ಅಯಾಸನವೆಂಬುದಿಲ್ಲ, ಕಸ್ಟಸುಖಗಳ ಗೊಡವೆಯಿಲ್ಲ, ನಿದ್ರಾಹಾರಗಳ ಯೋ ಚನೆಯಿಲ್ಲ. ಸೇವಾಮಗ್ಗ ನಾಗಿದ್ದ ಮಹಾನುಭಾವನು ತನಗೊಂದು ದೇಹವಿತ್ತೈಂದಾದರೂ ಯೋಚಿಸಿದ್ದನೋ ಇಲ್ಲವೋ ತಿಳಿಯಲು ಶಕ್ಯವಿಲ್ಲ.

11

ಸೌಮಿತ್ರಿಯ ಚರಿತ್ರೆಯು ಶ್ರೀಮದ್ರಾಮಾಯಣದಲ್ಲಿ ಪ್ರತ್ಯೇಕವಾಗಿ ಹೇಳಲ್ಪಟ್ಟಿಲ್ಲ ಶ್ರೀರಾಮನ ಚರಿತ್ರೆಯೊಂದಿಗೆ ಹೆಣೆದುಕೊಂಡಿರುವ ಈತನ ಚರಿತ್ರೆಯನ್ನು ಅದರಿಂದ ಸಂಗ್ರಹಿಸಬೇಕಾಗಿದೆ.

ಸೌಮಿತ್ರಿಯ ಚರಿತ್ರೆಯೊಂದಿಗೆ, ಇನ್ನಿಬ್ಬರು ಸ್ತೀಶಿರೋಮಣಿಯರ ಅಗಾಧ ಸ್ವಾರ್ಧತ್ಯಾಗದ ಉಲ್ಲೇಖವಾಗತಕ್ಕುದು ಅವಶ್ಯಕವಿದೆ. ಆತನ ತಾಯಿಯಾದ ಸುಮಿತ್ರಾದೇವಿ ಮತ್ತು ಆತನ ಪತ್ನಿ ಊರ್ಮಿಳಾದೇವಿ, ಕೈಕೇಯಿಯು ಶ್ರೀರಾಮನನ್ನು ಕಾನನಕ್ಕೆ ಕಳುಹಿಸಿದಾಗ, ಇಬ್ಬರು ಸಾಧ್ವೀಮಣಿಯರೂ, ದೈವಪ್ರೇರಿತರಾಗಿಯೋ ಎಂಬಂತೆ ಆತನ ಸೇವೆ ಗೆಂದು ತಮ್ಮ ಪುತ್ರನಾದ ವುತ್ತು ಪತಿಯಾದ ಲಕ್ಷ ನನ್ನು ಆತನ ಸೇವೆಗೆಂದೇ ಕಳುಹಿಸಿದರು, ಲಕ್ಷ್ಮಣನು ಶಾನೇ ಇಚ್ಛಿಸಿ ಹೊರಟನು ನಿಜ! ಆದರೆ, ಸಾಧ್ವಿಯರೂ, ಆತನ ಕಾರ್ಯಕ್ಕೆ ಮನಃಪೂರ್ವಕ ಅನುಮೋದಿಸಿ, ಹೆದಿನಾಲ್ಕು ವರ್ಷಕಾಲ ಆತನ ಅಗಲಿಕೆಯಿಂದ ಜೀವಧಾ ರಣೆಮಾಡಿಕೊಂಡಿರಲು ಸಂಕಲ್ಪಿಸಿದುದು ಅವರ ನಿಸ್ವಾರ್ಥ ಮನೋವೃ ಕ್ರಿಯ ಮತ್ತು ತ್ಯಾಗದ ಪರಮಾವಧಿಯ ಪ್ರಮಾಣವನ್ನು ಸ್ಪಷ್ಟೀಕರಿ ಸುತ್ತದೆ ಇವರ ಸ್ವಾರ್ಧತ್ಯಾಗದೆದುರಿಗೆ-ಅದರ ಸರಿಯಾದ ಬೆಲೆಯನ್ನು ಗಮನಿಸುವುದಾದಲ್ಲಿ, ಶ್ರೀರಾಮನ ಮಾತೆಯಾದ ಕೌಸಲ್ಯಾದೇವಿಯ ಮತ್ತು ರಾಣಿಯಾದ ಸೀತಾದೇವಿಯ ಸ್ವಾರ್ಧತ್ಯಾಗವೆಂಬುದು ಅಸ್ಟ್ರೇನೂ ಮಹೆ ತೃದ್ಧೆನ್ಸಿಸುವುದಿಲ್ಲ. ಏಕೆಂದರೆ ಅವರಿಬ್ಬರೂ ಒಂದು ಬಗೆಯಿ.೦ದ ಭಿ ಕ್ಟೊಳಪಟ್ಟು ಬಗೆಯ ಕಸ್ಟ ಸಡಬೇಕಾದುದು ಸಹೆಜನಿತ್ತು. ಆದ ಸುಮಿತ್ರೆ ಮತ್ತು ಊರ್ಮಿಳೆಯರಿಗೆ ಅಂತಹ ನಿರ್ಬಂಧವೇನೂ ಇರಲಿಲ್ಲ. ಸೌಮಿತ್ರಿಯು ವನಕ್ಕೆ ಹೋಗಬೇಕೆಂದು ಕೈಕೇಯಿಯಾಗಲೀ ದಶರಥನು ಗಲಿ ನಿರ್ಬಂಧಿಸಿರಲಿಲ್ಲ ಲಕ್ಷ್ಮಣನ ಕಾರ್ಯವು ಆತ್ಮಸಂತೋಷಪ್ರೇ ರಿತವಾದುದು. ಆತನು ಕೈಕೊಂಡ ಕಾರ್ಯದಲ್ಲಿ ಮನಃಪೂರ್ವಕವಾ। ಸಹೆಕರಿಸಿದುದು,, ಈರ್ವರು ಸ್ತ್ರೀತಿರೋಮಣಿಯರ ಘನತೆಯನ್ನೂ ಪವಿತ್ರ ಮನಸ್ಥಿತಿಯನ್ನೂ ಚೆನ್ನಾಗಿ ಪ್ರದರ್ಶಿಸುತ್ತದೆ.

ಕಾಲಕರ್ಮಪತಶಿಸಿ ತಿಯಿಂದ ಭಾರತೇಯರು ತಮ್ಮ ದೇಶಕ್ಕೂ ದರ್ಮಕ್ಕೂ ಸಹಜವಾದ ಪವಿತ್ರ ಧ್ಯೇಯಗಳನ್ನು ಮರೆತು ದಾಸ್ಥಮನಷೋ

111

ವೃತ್ತಿಗೊಳಗಾಗಿ ಕೆಡುತ್ತಿದ್ದಾತೆ. ಇಂತಹೆ ಪೆರಿಸ್ಥಿ ತಿಯಲ್ಲಿ ಅವರನ್ನು ಎಚ್ಚರಗೊಳಿಸಿ ಅವರಲ್ಲಿ ಕರ್ತವ್ಯ ಜಾಗೃತಿಯನ್ನುಂಟುಮಾಡಲು, ಹಿಂದಿನ ವರ ಜೀವಿತಗಳಿಗೆ ಮುಖ್ಯಾಧಾರಭೂತಗಳಾಗಿದ್ದ ಅಮೌಲ್ಯ ಧ್ಯೇಯಗ ಳನ್ನು ಅವರ ಕಣ್ಮನಗಳೆದುರಿಗೆ ತರುವುದಕ್ಕೆಂತಲೂ ಬೇರೆಯಾದ ಆವ ಶ್ಯಕ ಕಾರ್ಯವು ಮತ್ತೊಂದಿಲ್ಲ. ಆದುದರಿಂದ ಸುಬೋಧ ಕುಸುಮಾಂ ಜಲಿ ಗ್ರಂಥಮಾಲೆಯು ತನ್ನ ಜನ್ಮಥ್ಯೇಯವನ್ನ ನುಸರಿಸಿ, ಮಹನೀಯರ ಜೀವನ ಚರಿತ್ರೆಗಳ ದ್ವಾರಾ, ಪವಿತ್ರ ಥ್ರೇಯಗಳನ್ನು ಕನ್ನಡಿಗರೆದು ರಿಗೆ ವಿಸ್ಮರಿಸಲು ಪ್ರಯತ್ನಿಸಿದೆ. ಭಾಷಾಭಿಮಾನ-ದೇಶಾಭಿಮಾನ ತತ್ಪರ ರಾದ ಮಹನೀಯರು, ಅದಕ್ಕೆ ಸ್ವಹೆಸ್ತ ಪರಹೆಸ್ತ ಯೋಗ್ಯರೀತಿಯಿಂದ ಬೆಂಬಲಕೊಟು,, ಅದು ಕೈಕೊಂಡಿರುವ ಕಾರ್ಯವನ್ನು ಸಾಂಗವಾಗಿ ನೆರೆ ವೇರಿಸಿದ ಶ್ರೇಯಸ್ಸಿಗೆ ಭಾಗಿಗಳಾಗಬೇಕೆಂದು ಪ್ರಾರ್ಥಿಸುತ್ತೇವೆ,

ಬೆಂಗಳೂರು, } ಇತಿ ಸುಜನವಿಧೇಯ್ಯ

ತಾ. ೪-೭-೧೯೩ pS ಅಲಲವ

2 (| [J ಟು ಆಃ dA [| &) 2೬ 3ಟಿ Nn ಛು 9 28 4 21 ೪) 2೭೬ 2೬ AC ಛೆ Pa je ಭು oO CAL [ಈ

“ಮಗೂ ಲಕ್ಷ್ಮಣಾ, ನೀನು ರಾಮುನನ್ನೇ ತಂದೆಯಾದ ದಶರಥನನ್ನಾಗಿ ಭಾವಿಸು,

ಸೀತೆಯನ್ನೇ ನಾನೆಂದು ಭಾವಿಸು, ನೀನು ಹೋಗತಕ್ಕ ಕಾಡನ್ನೆ £€ ರಾಜಧಾನಿಯಾದ

ಆಯೋಧ್ಯೆಯನ್ನಾಗಿ ಭಾವಿಸ್ಕು ಸುಖವಾಗಿ ಹೋಗಿ "ಸುಮಿ ತ್ರಾ ದೇವಿ?

"ನಾಹಂ ಜಾನಾಮಿ RSC ನಾಹಂ ಜಾನಾಮಿ ಕುಂಡಲೇ!

ಲ್‌ ಲಿ ಮೆ

ಕಾನಾಮಿ ನಿತ್ಸಂ ಸಾದಾಭಿವಂದನಾತ್‌!?

ನೂಪುರೇತ್ತ

“ಸ್ಟಾಮಾ, aki ನನಗೆ(ಸೀತೆ ಯ) ಕೇಯೂರದ ಪರಿಚಯವಿಲ್ಲ ಆಕೆಯ ಕರ್ಣಾಭರಣವಾದ ಹುಂಡಲದ ಪರಿಚಯವೂ ನನಗಿಲ್ಲ, ಆದರೆ ನಿತ್ಯವೂ 1 ಜನ ಹಾಜಿ ವಾದನ ಮಾಡುತ್ತಿದ್ದಾಗ ನೋಡುತ್ತಿದ್ದ ಪೂದೂಭರಣನಾೂದ ನೂಪುರದ ಮಾತ್ರ ನನಗುಂಟುಿ?,

"ನಜ ತಾತಂ ನಶತ್ರುಫ್ಲುಂ ನಸುಮಿತ್ರಾಂ ಪರ ತಸ್ತ್ರಪ

ಮುಚ್ಚೆ ಫಹ ನಿ ಸ್ವರ್ಗ ೦೩೩೨ ನತ್ತ ತ್ರಾ ನಾ [3

“ಹೇ ಶತ್ರುನಾಶನಾ, ನನ್ನನ್ನು ಬಿಟ್ಟು ನನಗೆ ತಂದೆಯಾದ ದಶರಥನನ್ನಾ ಗಲ, ತಮ್ಮ ನಾದ ಶತ್ರುಘ ನನ್ನಾ ಗಲೀ, ಕೊನೆಗೆ ನನ್ನ ತಾಯಿಯಾದ ಸುಮಿತ್ರಾಡೇವಿಯನ್ನಾ ಗಲೀ ನೋಡಲಿಚ್ಛೆಯಿಲ್ಲ, ಹೆಚ್ಚೇನು ನನಗೆ ನಿನ್ನನ್ನು ಬಿಟ್ಟು ಸ್ವರ್ಗವೂ ಬೇರೆಯಿಲ್ಲ”, $

. ಲಕ್ಷ್ಮಣ

ಸೀತಾ ವನವಾಸ--ದುಃಖೀ ಸೌನಿುತ್ರಿ.

! ಈೀರಾನು ಸಹಾಯಂ |

ಶ್ರೀರಾಮಸೇವಾ ನಿರತನಾದ

ಸಾಮಿತ್ರಿ

ಅಧ್ಯಾಯ "ಜನನ ಬಾಲ್ಯ?

ಪರಮಂಷಾವನ್ಶೆ ನಮ್ಮ ಮಾತೃಭೂಮಿ, ಭಾರತ ದೇಶದಲ್ಲಿ, ಮಾ

ನವ ಜನ್ಮದ ಸಾರ್ಥಕತೆಗೆ ಅವಶ್ಯಕವೆನ್ಸಿಸುವ ಸಕಲ ಸದ್ಗುಣಗಳನ್ನೂ ಪರಮಾವಧಿ. ಪ್ರಮಾಣದಿಂದ ಆಚರಣೆಯಲ್ಲಿ ತಂದು ಅಭ್ಯಾಸದಲ್ಲಿಟ್ಟು ಕೊಂಡು ಅವುಗಳನ್ನು ತಮ್ಮ ಸಂತಾನರಿಗೆ ಆದರ್ಶವಾಗಿ ಬಿಟ್ಟುಹೋಗಿರುವ ನರೋತ್ತಮರು ಇತರ ಯಾವ ದೇಶಕ್ಕಿಂತಲೂ ವಿಶೇಷವಾಗಿ ದೊರೆಯು ವರು ಮನುಷ್ಯನಲ್ಲಿ ಸದ್ಗುಣ ಸನ್ನಡತೆಗಳು, ನೆಲೆಸಿ, ಬೆಳೆದು ಅಭಿವೃದ್ಧಿ ಗೊಂಡು, ಅವು ಆತನ ಜನ್ಮಸಾರ್ಥ ಕತೆಗೆ ಪ್ರಯೋಜಕವಾಗಬೇಕೆಂದಲ್ಲಿ ಮೊದಲು ಅವನಲ್ಲಿ ಕಂಡ.ಬರಬೇಕಾದ ಯೋಗ್ಯತೆಯೆಂದರೆ ವಿನಯ-ವಿಧೇ ಯತೆಗಳು. ನಿನಯ ವಿಧೇಯತೆಗಳು ಯಾವನಲ್ಲಿಲ್ಲವೋ ಅವನು, ಯಾರಿ ಗೂ ಅಣಗಿ ಮಣಗಿ ನಡೆಸದೆ, ಯಾರ ಮಾತನ್ನೂ ಲಕ್ಷ್ಯಮಾಡದೆ, ಯಾರ ಸಲಹೆ - ಸವಿನುಡಿಗಳಿಗೂ ಕಿವಿಗೊಡೆದವನಾಗಿ ಧೂರ್ತನೆನ್ನಿಸಿಕೊಳ್ಳಲ್ಪಡು ವನ್ನು ಅವನ ಮನಸ್ಸು ಸಮಾಧಾನ ಸ್ಥಿತಿಯಲ್ಲಿದ್ದು ಯುಕ್ಲಾಯುಕ್ತ್ಮ ಗಳನ್ನು ಕುರಿತು ವಿಚಾರ ನಡೆಯಿಸಲು ಅಶಕ್ಕವಾಗುವುದು. ಕಾಲಕ್ರಮ ದಲ್ಲಿ-ತಾನೇ ಎಲ್ಲವನ್ನೂ ತಿಳಿದವನು ತಾನು ಯಾರ ಅಂಕೆಗೆ ಒಳಪಟ್ಟು ನಡೆಯಬೇಕಾದ ಕಾರಣವೇನಿದೆ, ಎಂಬ ಮುಂತಾದ ಭಾವನೆಗಳೂ ಮನಸ್ಸಿ ನಲ್ಲಿ ನೆಲೆಸಿ, ಅವನು ದುರಭಿಮಾನಿಯೂ ದುರಾಗ್ರಹಿಯೂ ಆಗಿ ಪರಿಣಮಿಸು ವನ್ನು ಆದುದರಿಂದ ಮನುಷ್ಯನು ಚಿಕ್ಕಂದಿನಲ್ಲಿ ಹಿರಿಯರಿಗೂ ಗುರುಜನ ರಿಗೂ ವಿಧೇಯನಾಗಿ ಮಾತುಕಥೆಗಳಲ್ಲಿ ನಿನಯವುಳ್ಳವನಾಗಿ ನಡೆಯುವಿಕೆ ಯನ್ನು ಅಭ್ಯಾಸಮಾಡುವುದು ಅತ್ಯಾವಶ್ಯಕವಾಗಿರುವುದು.

ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

ವಿನಯ ವಿಧೇಯತೆಗಳು, ಮನುಷ್ಯ ರಲ್ಲೆ 6 ತನ್ನ ಗುರುಹಿರಿಯತಿ ರಿಂದ ಪ್ರಾರಂಭಿಸಿದಲ್ಲಿ ಪರಿಣಾಮದಲ್ಲಿ ಪರಮೇಶ ರನ ಛಿ ಭಕ ಕ್ರಿಯಲ್ಲಿ ಕೊನೆ ಗೊಳ್ಳ ಲೂ ಸಾಧ್ಯವಿರುವುದು, ಪ್ರತ ಸರಾಗಿರುವ ತನ್ನ ತಾಯಿತಂದೆಗಳಿಗೇ EE ತಲೆಬಾಗಲು 211.೬ ಸಮು ಟಿಸದವನು ಆದ ಶ್ಯ ನಾಗಿರುವ ದೇವರಿಗೆ ನಮಸ್ಸರಿಸಬೇಕೆಂಬುದನ್ನು ಒಪ್ಪು ವುದೂ ಕಷ ಸಾಧ್ಯ ವಿಜೆ. ಆದುದರಿಂದ ಪರೋಕ್ಷನಾಗಿರುವ ದೇವದೇವನಲ್ಲಿ ವಿಧೇಯಬುದ್ಧಿ ಯಿಂದ ನಡೆಯಬೇಕಾದ ಪಾಠವನ್ನು ಮನುಷ್ಯರು ಪ್ರತ್ಯಕ್ಷ ದೈವಗಳಂತಿ ರುವ ತಾಯಿತಂದೆಗಳಿಗೆ ನಿದೇಯರಾಗಿರುವುದರೆ ಮೂಲಕವೇ ಕಲಿಯಬೇ ಕಾಗಿದೆ.

"ಬಾಲ್ಯದಿಂದಲೂ ಬಾಲಕ ಬಾಲಿಕೆಯರಲ್ಲಿ ವಿನಯವಿಥೇಯತೆಗಳ ನಿರ್ಬಂಧವನ್ಸಿಟ್ಟು ಅವರನ್ನು ಒಂದು ಬಂಧಕಕ್ಕೆ ಒಳಪಟ್ಟಿವರಂತೆ ಬೆಳೆಯ ಗೊಡಿಸಿದಲ್ಲಿ ಮುಂದೆ ಅವರು, ಜದ ಸ್ವಾಭಾವಿಕ ಮನಸ್ಥಿತಿಯನ್ನೇ ಕೆಡೆಸಿ ಕೊಂಡು, ಸದಾ ಬೇರೊಬ್ಬ ಆಜ್ಞೆ ಗೆ ಒಳಪಟ್ಟು ನಡೆವ ಚಿತ್ತ ವೃತ್ತಿ ಯುಳ್ಳವರಾಗುವರು; ಅವರಲ್ಲ ವ್ಯಕ್ತಿ, ಕ್ಷ್ಮಮೇ (Individuality) ಜಡ ವಾಗಿ ಹೊ ೀಗುವುದು. ಅವರು ದಾಸ ಮನೋಭಾವವುಳ್ಳ ವಾಗಿಯೇ (೧181181 mentality) MS ಅವರಿಂದ ಯಾವ ಘನಕಾರ್ಯವೂ ನಡೆಯಲು ಅವಕಾಶವಾಗದು. ಅವರು ಸದಾ, ಪರಕೀಯರ ಸೂತ್ರದ ಬೊಂಬೆಗಳಂತಾಗಿ ವ್ಯರ್ಥೆ ಜೀನಿಗಳಾಗುವರು'ಎಂಬ ಬಂದು ಭಾವನೆಯ ಈಚೆಗೆ ಹೆಬ್ಬ ತೊಡಗಿದೆ. -"ಇಂತಹೆ ಕಾರ್ಯವನ್ನೇ ಮಾಡು, ಕಾರ್ಯವನ್ನು ಮಾಡಬೇಡ' ಎಂಬ ಮುಂತಾದ ಆಜ್ಞೆಗಳಿಗೆ ಮಕ್ಕಳನ್ನು ಒಳಪಡಿಸಿ ಬಗೆಯ ವಿಧೇಯತೆಗೆ ಅವರು ಅಡಿಯಾಳುಗಳಾಗಿ ನಡೆವಂತೆ ನಿರ್ಬಂಧಿಸಿ ಬೆಳೆಯಿಸಿದಲ್ಲಿ, ಹಾಗೆ ಬೆಳೆದವರು ಧೈರ್ಯಸಾಹೆಸಾದಿ ಗಳನ್ನು ನೀಗಿಕೊಂಡು ಹೇಡಿಗಳೂ, ದುರ್ಬಲರೂ ಆಗುವರು ಎಂದು ಈಚೆಗೆ ಕೆಲಮಂದಿ ಮಹನೀಯರು ಪ್ರತಿಪಾದಿಸುತ್ತಿರುವರು. ಮನುಷ್ಯನಿಗೆ ದಾಸ್ಯ ಮನೋಭಾವವಿರುವುದು ತಪ್ಪು - ಆತನು ಸ್ವತಂತ್ರಮನೋಭಾವವುಳ್ಳೆವ ನಾಗಿದ್ದು, ತನ್ನ ಮನಸ್ಸಾಕ್ಸಿಗೆ ವಿರೋಧವಿಲ್ಲದಂತೆ ನಡೆವ ಚಿತ್ತವೃತ್ತಿ ಯುಳ್ಳವನಾಗಿರಬೇಕು ಎಂಬುದನ್ನು ಸಕಲರೂ ಒಸ್ಸಬೇಕಾಗಿದೆ.

ಸೌಮಿತ್ರಿ ಪಿ

ಕಾರಣದಿಂದ, ಅವನು ಯುಕ್ತಾಯುಕ್ತ ವಿಚಾರವನ್ನು ನೀಗಿ ಸಕಲ ಕಾರ್ಯ ಗಳನ್ನೂ ತನ್ನ ಮನಬಂದಂತೆ ಮಾಡುವ ಸ್ವಾತಂತ್ರ್ಯವನ್ನು ಪಡೆದಿರಬೇ ಕೆಂದರೆ ಅದು ಮಾತ್ರ ತಪ್ಪುಮಾರ್ಗವೆನ್ನ ಬೇಕಾಗುವುದು ಎಕೆಂದರೆ ಯುಕ್ತಾಯುಕ್ತ ವಿವೇಚನೆಯುಳ್ಳ ಮನುಷ್ಯನು ಒಂದಾನೊಂದು ಕಾರ್ಯವು ಯುಕ್ತವಾದುದೆಂದೂ ನ್ಯಾಯಸಮ್ಮತವಾದುದೆಂದೂ ತಿಳಿದಿದ್ದರೂ, ಹೊನ್ನು ಮಣ್ಣು ಹೆಣ್ಣು ಮುಂತಾದುವುಗಳ ಆಕರ್ಷಣೆಗೂ, ದಾಕ್ಷಿಣ್ಯಕ್ಕೂ ಒಳಗಾಗಿ ಸರಿಯಾದುದನ್ನು ತಪ್ಪೆಂದೂ, ತಪ್ಪಾದುದನ್ನು ಸರಿಯೆಂದೂ ಹೇಳುವವ ನಾದರೆ ಅದನ್ನು ದಾಸ್ಯಮನೋಭಾವವೆನ್ನ ಬೇಕಲ್ಲದೆ, ಯುಕ್ತಾಯುಕ್ತ ಪೆರಿ ಜ್ಞಾನವೇ ಇಲ್ಲದ ಮಗುವು ಮಾಡುವ ಒಂದು ಕಾರ್ಯವನ್ನು ಹೆಸರಿನಿಂದ ಕರೆಯಲಾಗದು, ಶಿಕ್ಷೆಯ ಭೆಯಕ್ಳಾಗಲೀ, ಲಾಭದ ಆಸೆಯಿಂದಲಾಗಲೀ, ಮನಸ್ಸಾಕ್ಷಿಗೆ ವಿರೋಧವಾಗಿ ನಡೆಯದಂತೆ ಬೋಧಿಸಿ ಯುಕ್ತಾಯುಕ್ತಗಳ ನ್ನು ತಿಳುಹಿಸಿ ಕೊಡೆತಕ್ಕ ಕಾರ್ಯವಾದರೂ ಬಾಲ್ಯದಲ್ಲೇ ನಡೆಯಬೇಕಾ ಗಿದೆ. ಹಿರಿಯರೂ, ತಂದೆಶಾಯಿಗಳೂ, ಜ್ಞಾನಿಗಳೂ ಹೇಳಿದ ಮಾತನ್ನು

ವಿನಯದಿಂದ ಕೇಳುವ- ಮತ್ತು ಹಾಗೆ ಕೇಳಿದ ಮಾತಿಗೆ ಅನುಸಾರವಾಗಿ ವಿಧೇಯತೆಯಿಂದ ನಡೆವ, ಸಾಧುಸ್ವಭಾವವು ಮನುಷ್ಯನಲ್ಲಿ ಏರ್ಪಡದಿದ್ದಲ್ಲಿ, ಆತನು ಉತ್ತಮ ನಾಗರಿಕನೆನಿಸಿಕೊಂಡು ಲೋಕದಲ್ಲಿ ಜೀವಿಸುವುದು ಸುಲಭವಲ್ಲ. - ಇಂತಹೆ ವಿನಯ ಮತ್ತು ವಿಥೇಯತೆಗಳು ಅವನಲ್ಲಿ ಏರ್ಪಡೆ ದಿದ್ದಲ್ಲಿ ಅವನು ತನ್ನ ಮಾತಾಷಿತೃಗಳಿಗಾಗಲೀ, ಗುರುಹಿರಿಯರಿಗಾಗಲೀ, ಲೋಕಕ್ಕಾಗಲೀ, ತನ್ನ ಸೇವೆಯನ್ನು ಸಲ್ಲಿಸಲಿಕ್ಕಾದರೂ ಹೇಗೆ ಸಾಧ್ಯ ವಿದ್ದೀತು! ಸ್ವಯಂ ಧೂರ್ತನಾದ ಮನುಷ್ಯನನ್ನು ಯಾರು ಪ್ರೇಮ ದಿಂದ ಸಮಾಪಿಸಲು ಸಾಧ್ಯವಿದ್ದೀತು. ಆದುದರಿಂದ ಮನುಷ್ಯನು ತನ್ನ ಕುಟು:ಬಕ್ಕಾಗಲೀ್ವೀ ತನ್ನ ಜನಾಂಗಕ್ಕಾಗಲಿ, ದೇಶಕ್ಕಾಗಲೀ, ಉಪಕಾರಿ ವ್ಯಕ್ತಿಯಾಗಬೇಕೆಂದಲ್ಲಿ ಅವನಲ್ಲಿ ಮೇಲ್ಕಂಡ ಗುಣಗಳು ಯುಕ್ತಪ್ರಮಾಣ ದಲ್ಲಿ ನೆಲೆಸಿದ್ದರಲ್ಲಡೆ ಏನೂ ಉಸೆಯೋಗವಾಗದು, ನಮ್ಮ ಕಥಾನಾಯ ಕನು ಬಾಲ್ಯದಲ್ಲಿ ತನ್ನ ಅಣ್ಣನಾದ ಶ್ರೀರಾಮನಿಗೆ ವಿಧೇಯನಾಗಿದ್ದು, ಅತ ನನ್ನೇ ಶನ್ನ ಸರ್ವಸ್ವವೂ ಎಂದು ತಿಳಿದು ಸೇವೆಮಾಡಿಕೊಂಡಿದ್ದರೂ, ಯಾವಾ ಗಲೂ ಹೇಡಿತನ ಕ್ಷುದ್ರತನಗಳನ್ನು ಪ್ರದರ್ಶಿಸದೆ, ತನ್ನ ಮನಸ್ಸಾಕ್ಷಿಯನ್ನು

ಸುಬೋಧ ಕುಸುಮಾಂಜಲಿ ಗ್ರಂಥೆಮಾಲಾ

ನಿಧೇಯತೆಗೆ ಮಾರಿಸೊಳ್ಳದೆ, ಶ್ರೀರಾಮನ ಆಜ್ಞೆಯು ತನ್ನ ಮನಸ್ಸಾಕ್ಷಿ ಗೆ ನಿರೋಧವೆಂದು ತೋರಿಬಂದಾಗಲೆಲ್ಲ, ಅದು ತಪ್ಪೆಂದು ನಿರ್ದಾಕ್ಷಿಣ್ಯವಾ ಗಿ ವಿಜ್ಞಾಪಿಸಿ, ಕೊನೆಗೆ ಅದು ರಾಜಾಜ್ಞೈೆಯಂತಾದಾಗ ಮಾತ್ರ ವಿಧಿಯಿಲ್ಲದೆ ಅದರಂತೆ ಆಚರಿಸಿದ ಉದಾಹರಣೆಗಳು ಮಹಾನುಭಾವನ ಚರಿತ್ರೆಯಲ್ಲಿ, ಅಲ್ಲಲ್ಲಿ ಕಂಡುಬರುತ್ತವೆ, ಭ್ರಾತೃಪ್ರೇಮ, ಸಿಸ್ವಾರ್ಥಸೇವೆ ಮುಂತಾದ ಸದ್ಗುಣಗಳಿಗೆ ಆದರ್ಶಮೂರ್ತಿಯಂತಿರುವ ಮಹನೀಯನ ಜೀವಿತವೂ ನಮ್ಮ ಕರ್ಣಾಟಕ ಬಾಲಕ ಬಾಲಿಕೆಯೆರಿಂದ ಓದಲೂ - ಅನುಕರಿಸಲ್ಪಡಲೂ

ಅರ್ಹವಾದುದು, ಆದುದರಿಂದ ಅದನ್ನಿಲ್ಲಿ ಕೊಡಬಯಸುತ್ತೇವೆ.

ಸೂರ್ಯವಂಶದ ರಾಜಶ್ರೇಷ್ಠನಾದ ದಶರಥನು ಅಯೋಧ್ಯಾನಗರಿ ಯಲ್ಲಿ ಧರ್ಮದಿಂದ ರಾಜ್ಯ ಭಾರಮಾಡುತ್ತಿದ್ದನು. ಆತನಿಗೆ ಮೂರುಮಂದಿ ಹೆಂಡಿರು. ಪಟ್ಟಿ ಮಹಿಷಿಯು ಕೌಸಲ್ಯಾದೇನಿ, ಕೌಸಲೈಯ ತರುವಾಯ ದಶರಥನು ಸುಮಿತ್ರೆಯೆಂಬ ಕನ್ಯಾಮಣಿಯನ್ನು ಭಾರೈಯನ್ನಾಗಿ ಸ್ವೀಕರಿಸಿ ದನು. ಸುಮಿತ್ರೆಯೆಂದರೆ- ಹೆಸರು ಆಕೆಗೆ ಅನ್ವರ್ಥವಾಗಿರುವುದು. ಆಕೆಯು ಪತಿವ್ರತಾ ಧರ್ಮನಿರತಳಾಗಿ, ಸದಾ ಸತ್ಕಾರ್ಯಗಳಲ್ಲೇ ತನ್ನ ಕಾಲವನ್ನು ಕಳೆಯುತ್ತ, ಸಕಲರಲ್ಲೂ ಸ್ನೇಹೆಪ್ರೇಮಗಳನ್ನು ಂಟಾಗಿ, ಎಲ್ಲರ ಗೌರವಾದರಗಳಿಗೂ ಪಾತ್ರಳೆನ್ಸಿಸಿಕೊಂಡಿದ್ದಳು, ತನಗಿಂತಲೂ ಹಿರಿಯ ರಾಣಿಯಾದ ಕೌಸಲೈಯಲ್ಲಿ ಸುಮಿತ್ರೆಯು ನಿಶೇಷ ಭಕ್ತಿಗೌರವಗಳನ್ನುಂ ಟಾಗಿ ಆಕೆಯ ಮನಸ್ಸಿಗೆ ಸಮ್ಮತವಾದ ಮಾರ್ಗದಲ್ಲಿ ಯುತ್ತಲಿದ್ದಳು, ಇಬ್ಬರಲ್ಲದೆ ದಶರಥನಿಗೆ ಕೈಕೇಯಿಯೆಂಬ ಮತ್ತೊಬ್ಬ ರಾಣಿಯೂ ಇದ್ದಳು. ಅವಳಿಗೆ ತಾನು ರೂಪವತಿಯೆಂಬ ಅಹಂಕಾರವು ಲೇಶ ಮಾತ್ರ ವಿದ್ದಿತು, ಅಲ್ಲದೆ ರಾಜನೂ ಕಿರಿಯ ಹೆಂಡತಿಯೆಂದು ಅವಳಲ್ಲಿ ಹೆಚ್ಚು ಮಮತೆಯನ್ನು ವ್ಯಕ್ತಪಡಿಸುತ್ತಿದ್ದನು. ಆದರೆ ಕೌಸಲ್ಯಾಸುಮಿತ್ರೆಯರು ಕಾರಣಕ್ಕಾಗಿ ರಾಜನಲ್ಲಿ ಅವಿಶ್ವಾಸಕ್ಕೆ ಅವಕಾಶಕೊಡದೆ, ತಮ್ಮ ಪತಿ ಭಕ್ತಿಗೆ ಕುಂದ: ತಂದುಕೊಳ್ಳದೆ, ಎಂದಿನಂತೆ ಪಕಿಸೇವಾ ಶತ್ಪರರಾಗಿ, ಕ್ಸ ಕೇಯಿಯನ್ನೂ ತಮ್ಮಲ್ಲೊಬ್ಬಳನ್ನಾಗಿಯೇ ಪ್ರೀತಿ ಆದರಗಳಿಂದ ಕಾಣುತ್ತ, ಕುಟುಂಬಯಾತ್ರೆಯನ್ನು ಸಾಗಿಸುತ್ತಿದ್ದರು

2 ಸೌಮಿತ್ರಿ

ದಶರಧನಿಗೆ ತನ್ನಾ ಮೂರುಮಂದಿ ಪೆತ್ಲಿಯರಲ್ಲೂ ಬಹುಕಾಲಗಳ ವರೆಗೆ ಮಕ್ಕಳಾಗದಿರಲು ಆತನ ಚಿಂತೆಯು ಮಿತಿನಿಕಾರಿತು. ಶ್ರೇಷ್ಠವಾದ ಇಕ್ಸಾಕುಕುಲವು ತನ್ನವರೆಗೆ ಅನಿಚ್ಛೆನ್ನವಾಗಿ ನಡೆದುಬಂದು, ದುರ್ದೆವಿ ಯಾದ ತನ್ನಲ್ಲಿ ಅದು ನಿಂತುಹೋಗುವಂತಾಯಿತಲ್ಲ ಎಂದು ಅಗಾಧಮನೋ ವ್ಯಥೆಯಿಂದ, ತನ್ನ ಕುಲಗುರುಗಳಾದ ವಸಿಷ್ಪಮಹೆರ್ಸಿಗಳಲ್ಲಿ ವಿಜ್ಞಾ ನಿಸಿ ಕೊಂಡೆನು. ಅವರು, ಮಹರ್ಷಿಶ್ರೇಷ್ಠರಾದ ಖುಷ್ಯಶೃಂಗರನ್ನು ಕರೆಯಿಸಿ ಕೊಂಡು, ಅವರ ಸಾನ್ನಿ ಧ್ಯದಲ್ಲಿ ಪುತ್ರಕಾಮೇಷ್ಟಿ ಯಾಗಮಾಡಿದಲ್ಲಿ ಲೋ ಕೋತ್ತರ ಪುತ್ರಸಂತಾನವುಂಬಾಗುವುದೇದು ಭರವಸೆಕೊಟ್ಟಿರು, ಒಡನೆ ದಶರಥನು, ಜಷ್ಯಶೃಂಗ ಮುನೀಶ್ವರರನ್ನು ಕರೆತರಲು ಆಸ್ಲೈೆರನ್ನು ಕಳು ಓಸಿ, ಯಾಗಕ್ಕೂ ತಕ್ಕ ಸಿದ್ಧತೆಗಳನ್ನೆಲ್ಲ ಮಾಡಿದನು. ಯುಕ್ತಕಾಲದಲ್ಲಿ ಮಹಾನುಭಾವರಾದ ಖುಷ್ಯಶೃಂಗರೂ ಬಂದರು, ದೇಶದೇಶದಿಂದ ಭೂಸು ರೋತ್ತಮರೂ ರಾಜಾಧಿರಾಜರೂ ಆಗಮಿಸಿ, ಯಾಗಶಾಲೆಯು ತುಂಬಿ ಹೋಯಿತು. ಮಹಾರಾಜನಿಗೆ ಆಶೀರ್ವದಿಸಲು ಮಹಾಮಹಿಮರಾದ ಅನೇ ಕಮಂದಿ ಮಹರ್ಸಿಗಳೂ ಆಹ್ವಾನಿತರಾಗಿ ಬಂದು ಯಾಗಶಾಲೆಯ ಒಂದು ಭಾಗದಲ್ಲಿ ಕುಳಿತಿದ್ದರು. ಮಹಾರಾಣಿಯರ ಮಂಗಳಾಕಾಂಕ್ಷಿಗಳಾಗಿ ಬಂ ದು ಸೇರಿದ ಖುಹಿಪತ್ತಿಯರಿಂದಲೂ, ಇತರ ಸ:ಮಂಗಲೆಯರಿಂದಲೂ ಸಭೆ ಒಂದು ಪಾರ್ಶ್ವವು ಅಲಂಕರಿಸಲ್ಪಟ್ಟದ್ದಿತು, ಯಾಗವು ವಿಜೃಂಭಣೆ ಯಿಂದ ನೆರೆವೇರಿತು ಸಕಲಜೀವತೆಗಳಿಗೂ ಯಜ್ಞಾ ಹುತಿಯು ಸಲ್ಲಿಸಲ್ಪಟ್ಟ ತುಹೋಮಕುಂಡೆದಿಂದ ಯಜ್ಞ ಪುರುಷನೇ ರೂಪಗೊಂಡು ಮಂತ್ರಸಿದ್ಧವಾ ಪಾಯಸಸಪಾತ್ರೆಯನ್ನು ಹಿಡಿದು ಮೈದೋರಿ ಬಂದು ಅದನ್ನು ದಶರಥ ಸಾ ರ್ವಭೌಮನ ಹಸ್ತದಲ್ಲಿ ಸಮರ್ಪಿಸಿದರು. ಆತನ ಆದೇಶದಂತೆ ರಾಜನು ಅದನ್ನು ತನ್ನ ಮೂವರು ಪತ್ಲಿಯರಿಗೂ ಹೆಂಚಿ ಕೊಟ್ಟಿ ನು, ಅಪೂರ್ವ ವರಪ್ರದಾನ ರೀತಿಯು ಯಾಗಮಂಟಪೆದಲ್ಲಿದ್ದ ಸಕಲರನ್ನೂ ಆಶ್ಚರ್ಯ ಮಗ್ನರನ್ನಾಗಿಸಿತು. ಖಸಿಮುನಿಗಳಲ್ಲರೂ ಪರಮ ಸಂತುಷ್ಟರಾಗಿ ಸಾಧು ಸಾಧುವೆಂದು ಹೊಗಳಿದರು. ಭೂಸುರೋತ್ತಮರು ಆಶೀರ್ವದಿಸಿದರು. ಸಕಲರೂ ಆನಂದಾಂಬುಧಿಯೆನ್ಲಿ ಓಲಾಡಿದರು,

ಸುಬೋಧೆ ಕುಸುಮಾಂಜಲಿ ಗ್ರಂಥೆಮಾಲಾ

ಲೋಕದಲ್ಲಿ ಶ್ರೀರಾಮರ ಅವತಾರವ್ರ ರಾವಣಾದಿ ದುರುಳ ರಾಕ್ಷಸ ಕುಲ ವಧಾಕಾರ್ಯಕ್ಕಾಗಿಯೇ ಆದ:ದು ಎಂಬುದು ಸುಪ್ರಸಿದ್ದೆವಲ್ಲವೆ?

ದುಷ್ಟ ರಾಕ್ಷಸರ ಬಾಧೆಯನ್ನು ತಾಳಲಾರದೆ, ಶರಣಾಗತರಾಗಿ ತನ್ನನ್ನು ಪ್ರಾರ್ಥಿಸಿದ ಇಂದ್ರಾದಿ ದೇವತೆಗಳಿಗೂ ಖಷಿಮನಿಗಳಿಗೂ ಅಭಯಪ್ರ ದಾನಮಾಡಿದ ಶ್ರೀ ಮಹಾವಿಷ್ಣುವು ದೇವತೆಗಳಿಗೆ ವಾನರ ಬಲ್ಲೂಕಗಳಾಗಿ ಅವತಾರಮಾಡುವಂತೆ ಆಜ್ಞಾಪಿಸಿ ತಾನು ದಶರಥರಾಬೇಂದ್ರನ ಪತ್ನಿಯ ರಲ್ಲಿ ಪುತ್ರತ್ವೇನ ಅವತಾರ ಮಾಡಲು ನಿಶ್ಚಯಿಸಿದನು, ತಾನು ಮಾತ್ರವಲ್ಲ” ಕ್ರೀರಸಮುದ್ರದಲ್ಲಿ ತನಗೆ ಯೋಗನಿದ್ರೆಯಲ್ಲಿ ಶಯ್ಯೆಯಾಗಿ ಸೇವೆಮಾಡುತ ಲಿದ್ದ ಆದಿಶೇಷನನ್ನೂ. ತನ್ನ ಎಡಬಲ ಕೈಗಳ ಆಯುಧಗಳಾದ ಶಂಖಚ ಕ್ರಗಳನ್ನೂ ತನ್ನ ತಮ್ಮಂದಿರಾಗಿ ಅವತರಿಸುವಂತೆ ಆಜ್ಞಾ ಓಿಸಿದನು, ಇತ್ತ, ಮಂತ್ರವೂತವಾದ ದಿವ್ಯ ಪಾಯಸವು ಮೂವರು ರಾಜಪತ್ನಿ ಯರಿಗೂ ಹೆಂಚಲ್ಪಟ್ಟತೆಂದು ಹೇಳಿತಲ್ಲವೆ? ಅದನ್ನು ಭುಜಿಸಿದ ರಾಜಪ ತ್ಲಿಯರು ಯಥಾ ಕಾಲದಲ್ಲಿ ಗರ್ಭಧಾರಣ ಮಾಡಿದರು. ತನ್ನ ಮೂವರು ರಾಣಿಯರೂ ವಿಕಕಾಲದಲ್ಲಿ ಗರ್ಭಧಾರಣ ಮಾಡಿದ ಸಂಗತಿಯನ್ನು ಕಿಳಿದು ದಶರಥನು ಪರಮಾನಂದಗೊಂಡನ್ನು ತನ್ನ ಬಾಳೆಯ ಸಾರ್ಥಕವಾಯಿ ತೆಂದುಕೊಂಡನು. ಗರ್ಭಿಣೀ ಸ್ತ್ರೀಯರಿಗೆ ಆಯಾ ಕಾಲಕ್ಕೆ ನಡೆಯ ಬೇಕಾದ ಸೀಮಂತಾದಿ ಸಕಲ ಕಾರ್ಯಗಳನ್ನೂ ಯಥಾವತ್ತಾಗಿ ನಡೆಯಿ ಸಿದನ್ನು ಅವರ ಸ್ವಾಭಾವಿಕ ಬಯಕೆಗಳನ್ನೆ ಲ್ಲ ಲೋಪವಿಲ್ಲದೆ ಫೆರೆಷೇರಿಸಿ ದನು ಪ್ರಕೃತಿನಿಯಮದಂತೆ ಮಹಾರಾಣಿಯರ ಗರ್ಭವು ಒಂಭತ್ತು ತಿಂಗ ಭಕಾಲ ಸುರಕ್ಷಿತವಾಗಿ ಬೆಳೆದು, ಮುಂದೆ ಚೈತ್ರ ಶುದ್ಧ ನವಮಿ ಶುಭದಿನ ದಲ್ಲಿ ಸಕಲ ಶುಭ ಗ್ರಹೆಗಳೂ ಉಚ್ಚ ಸ್ಟ್ರಾ ನದಲ್ಲಿದ್ದೆ ಒಂದು ಶುಭ ಮುಹೂ ರ್ಶದಲ್ಲಿ ಪಟ್ಟಿ ದಾಣಿ ಕೌಸಲ್ಯಾದೇನಿಯ ಗರ್ಭಸುಧಾಂಬುಧಿಯಲ್ಲಿ ಒಂದು ಪುತ್ರರತ್ನವು ಉದಯಿಸಿತು ಕಾಲದಲ್ಲಿ ದಿಕ್ಕುಗಳಿಲ್ಲವೂ ಸುಪ್ರಸನ್ನವಾ ದುವು. ಸುವಾಸನಾಯುಕ್ತವಾದ ಮಂದಮಾರುತವು ಬೀಸಿತು. ಸಕಲರ ಮನಸ್ಸೂ ಉಲ್ಲಾ ಸಗೊಂಡಿತ್ತು ಮಹನೀಯನಿಂದ ಲೋಕದಲ್ಲಿ ದುಷ್ಟ

ಶಿಕ್ಷಣ, ಶಿಷ್ಟರಕ್ಷಣ, ಧರ್ಮಸ್ಥಾ ಪನಾದಿ ಮಹತ್ಕ್ಯಾರ್ಯಗಳು ನಡೆದು ಜಗೆ ತ್ರಿನಲ್ಲಿ ಶಾಂತಿಯು ನೆಲೆಸಲು ಅವಕಾಶವಾಗುವುದೆಂದು ತಪೋಧನರಾದ ಖುಷಿಮುನಿಗಳು ಪರಮಸಂತ:ಸ್ವರಾದದು.

ಸೌಮಿತ್ರಿ

ಪಟ್ಟದ ರಾಣಿಯಲ್ಲಿ ಸಂತಾನೋದಯವಾಯಿತೆಂದು ಹರ್ಷಗೊಂಡಿದ್ದ ರಾಜನಿಗೆ ಚಿಕ್ಕರಾಣಿಯಾದ ಕೈಕೇಯಿಯೂ ಒಂದು ಗಂಡು ಮಗುವನ್ನು ಪ್ರಸವಿಸಿದಳೆಂಬ ಶುಭವಾತ್ತೇಯನ್ನು ದಾದಿಯರು ತಿಳಿಸಿ, ಆತನ ಸಂತೋ ಹವನ್ನು ಹೆಚ್ಚಿಸಿದರು. ತನ್ನ ಮತ್ತೊಬ್ಬ ರಾಣಿ ಸುಮಿತ್ರಾದೇನಿಯ: ಇನ್ನೂ ಪ್ರಸವಿಸಲಿಲ್ಲವೆಂದು ರಾಜನು ಯೋಚಿಸುತ್ತಿದ್ದ ವೇಳೆಯಲ್ಲೇ ಕೆಯೂ ಅವಳಿ ಮಕ್ಕಳನ್ನು ಹೆಡೆದಳೆಂಬ ಶುಭವಾರ್ಶೆಯ ರಾಜನಿಗೆ ತರಲ್ಪ ಟ್ರೃತು. ಸುಮಿತ್ರಾದೇವಿಯು ಯಮಳ ಶಿಶುಗಳನ್ನು ಸುಖವಾಗಿ ಪ್ರಸವಿಸಿ, ಅವರೊಂದಿಗೆ ಪ್ರಸವಗೃಹದಲ್ಲಿ, ಇಂದ್ರೋಪೇಂದ್ರರನ್ನು ಹೆತ್ತ ಅದಿತೀದೇ ವಿಯಂತೆ ಪ್ರಕಾಶಿಸುತ್ತಿದ್ದುದನ್ನು ಕಂಡು ದಶರಥರಾಜೇಂದ್ರನು ಪರಮಸಂ ಭ್ರಮದಿಂದ ಮಂಗಳಸ್ನಾ ನಾದಿಗಳನ್ನು ಮಾಡಿ, ಭೂಸುರವರ್ಗಕ್ಕೆ ಗೋ ಭೂಹಿರಣ್ಯಾದಿ ಸಕಲದಾನಗಳನ್ನೂ ಮನದಣಿಯೆ ಕೊಟ್ಟು, ಸಕಲರನ್ನೂ ಆದರಿಸಿ, ಸಂತುಷ್ಟಿ ಗೊಳಿಸಿದನು.

ನಾಲ್ವರು ಪ್ರತ್ರರತ್ನಗಳಿಗೂ, ದಶರಧರಾಜೀಂದ್ರನು ಜಾತಕರ್ಮ ನಾಮಕರಣಾದಿ ವಿಧ್ಯುಕ್ತಕರ್ಮಗಳನ್ನು ಸಾಂಗವಾಗಿ ನೆರವೇರಿಸಿ ಕ್ರಮ ವಾಗಿ ಶ್ರೀರಾಮನೆಂದೂ, ಭರತನೆಂದೂ ಲಕ್ಷ ನೆಂದೂ ಶತ್ರುಘ್ನ ನೆಂದೂ ಶುಭನಾಮಥೇಯಗಳನ್ನ್ನಿಟ್ಟಿ ಕರೆದನು. ಇವರಲ್ಲಿ, ಸಾಕ್ಸುನ್ಮ ಹಾನಿಷ್ಣುವೇ ಶ್ರೀರಾಮನಾಗಿಯೂ, ನಿಷ್ಣುಶಯ್ಯನಾದ ಆದಿಕೇಷನೇ ಕ್ಷ್ಮಣನಾಗಿಯೂ, ವಿಷ್ಣುವಿನ ಶಂಖಚಕೃಗಳೇ ಭರತ ಶತ್ರುಘ್ನ ರಾಗಿಯೂ ಅವತಾರ ಮಾಡಿರುವರೆಂದು ಬ್ರಹ್ಮಜ್ಞಾನಿಗಳಾದ ಮಹೆರ್ಷೀಗಳು ತಿಳಿದು, ಇನ್ನು ಲೋಕದಲ್ಲಿ ರಾಕ್ಷಸರ ಬಾಧೆಯು ಅಳಿದು ಧರ್ಮವೂ ಶಾಂತಿಯೂ ಸ್ಥಾಪಿಸಲ್ಪಡುವುದು; ಸಜ್ಜನರು ನಿಶ್ಚಿಂತೆಯಿಂದ ಜೀವಿಸಲು ಮಾರ್ಗವಾ ಗುವುದು, ಎಂದು ಪರಮ ಸಂತೋಷದಿಂದ ಅನಂದಾಶ್ರುಗಳನ್ನು ಸುರಿಸು ತ್ತಾ ಭಗವಧ್ಯಾನ ಪರರಾದರು,

ಶಿಶುತನದಲ್ಲಿ ನಾಲ್ವರು ಮಕ್ಕಳೂ ತಮ್ಮ ತಮ್ಮ ಮಾತೆಯರಿಗೂ, ತಂ ದೆಯಾದ ದಶರಥ ರಾಜೀಂದ್ರನಿಗೂ ಪರಮಾನಂದವನ್ನು ಂಟುಮಾಡುತ್ತ, ತಮ್ಮ ಬಾಲಲೀಲೆಗಳಿಂದ ಅವರ ದಾಂಪತ್ಯ ಪ್ರೇಮಬಂಧನಗಳನ್ನು

ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

ವೃದ್ಧಿಗೊಳಿಸುತ್ತ, ಅರಮನೆಯಲ್ಲಿನ ಸಕಲರ ಲಾಲನೆಗೂ ಪಾತ್ರರಾಗಿ, ಶುಕ್ಲಪಕ್ಷದ ಚಂದ್ರಕಾಂತಿಯಂತೆ ಅಭಿವೃದ್ಧಿ ಹೊಂದುತ್ತಿದ್ದರು.

ಅಧ್ಯಾಯ ¢ ಸಿದ್ಧಾಶ್ರಮಕ್ಕೆ?

ದಶರಧರಾಜೇಂದ್ರನ ನಾಲ್ವರು ವ.ಕೃಳೂ ಅರಮನೆಯಲ್ಲಿ, ತಾಯಿ ತಂದೆಯರ ಆದರ ಪೋಷಣೆಗಳಲ್ಲಿ, ಸೇವಕ ಸೇವಿಕೆಯರ ಲಾಲನೆ ಸಾಲನೆಗ ಛಲ್ಲಿ ದಿನದಿನಕ್ಕೆ ಬೆಳೆದು ಅ: ಭಿವೃ ದ್ಧಿ ಗೊಂಡರು, ನಾಲ್ವರು ರಾಜಕು ಮಾರರೂ ಪರಸ್ಪರ ಪ್ರೇಮಸೌಹನರ್ದಗಳಿಂದ ಒಬ್ಬ \ರೊಡನೊಬ್ಯ ರು ಬೆರೆದು ಆಡುತ್ತಿ ದ್ವರಾದರೂ, ಲಕ್ಷ್ಮಣ ಷು ವಿಕೇಷವಾಗಿ ಕಡೆಗೆ ಒಲುವುಳ್ಳವನಾಗಿಯೂ, ಶತ್ರುಘ್ನನು ಭರತನ ಕಡೆಗೆ ಪ್ರೀತಿಯುಳ್ಳವನಾ ಗಿಯೂ, ಆಟಪಾಟಗಳಲ್ಲಿ ಅವರನ್ನು ಅನುಸರಿಸಿ ಸಂಚರಿಸುತ್ತ ಇರುತ್ತಿ ದ್ದ ರು. ಹೀಗಿರುತ್ತಿರಲು ದಶರಧನು ಅವರನ್ನು ಸಕಲ ವಿದ್ಯಾಪಾರಂಗತರ ನ್ನ್ನ ಗಿಸಬೇಕೆಂದು ಕುಲಗುರುಗಳಾದ ವಸಿಷ್ಠ ಮಹರ್ಷಿಗಳ ವಶಕ್ಕೆ ಒಪ್ಪಿ ಸಿದನು. ರಾಜಪುತ್ರರಾದ ನಾಲ್ವರು ಬಾಲಕರೂ ತಮ್ಮ ಸಹೆಪೂ ಜ್‌ ಇತರ ಬಾಲಕರೊಂದಿಗೆ ಬೆರೆದು, ಸ್ವಲ್ಪ ಕಾಲದಲ್ಲೆ ಫ್ರತ್ರಿಯೋಚಿತವಾದ ಸಕಲ ವಿದ್ಯೆಗಳಲ್ಲೂ ಪಾರಂಗತರಾದರು ದಶರಥರಾಜೀಂದ್ರ ನು ತೇಜಸ್ವಿ ಗಳೂ, ಸೂಕ್ಷ್ಮಃ ಮತಿಗಳೂ, ಪರಾಕ್ರನಿಗಳೂ ಆದ ತನ್ನ ಮಕ್ಕಳನ್ನು ಕಂಡು, ತನ್ನ ಸಮಾನ : ಭಾಗ್ಯ ಶಾಲಿಯು ಧ್ವಿಯಲ್ಲ ಮತ್ತಾರೂ ಇಲ್ಲವೆಂ ದುಕೊಂಡು ತಾಜ: ಗಿದ್ದನು.

ಶ್ರೀರಾಮಚಂದ್ರನಿಗೆ ಹದಿನಾರನೆಯ ವಯಸ್ಸು ಸಮಿಸಾಹಿಸುತ್ತಿರುವ ಸಮಯ. ವೇಳೆಗೆ, ವಿಶ್ವಾವಿ.ತ್ರಮಹರ್ಷಿಗಳ. ಬಂದು ತಮ್ಮ ಯಾಗರಕ್ಷ ಣೆಗಾಗಿ, ಶಿ ತೆ ರಾಮನನ್ನು ತಮ್ಮೊಂದಿಗೆ ಕಳುಹಿಸಬೇಕೆಂದು ದಶರಧನನ್ನು ಯಾಚಿಸಿದರು, ದಶರಥರಾಜನು ಪುತ್ರವ್ಯಾಮೋಹೆದಿಂದ ಅವನನ್ನು ಅಗ ಲಿರಲು ಸಮ್ಮತಿಸದೆ, ತಾನೇ ಸೈನ್ಯಸವೋಕವಾಗಿ ಬಂದು ಯಾಗಸಂರಕ್ಷಣೆ

ಸೌಮಿತಿ

ಮಾಡುತ್ತೇನೆಂದನು,. ಮಾತನ್ನು ಕೇಳಿ ಶೀಘ್ರಕೋಸಿಗಳಾದ ಮುನಿ ಗಳು ಕುಪಿಶರಾಗಿ ಹೊರಡುತ್ತಿರಲು, ವಸಿಷ್ಠಮಹರ್ಸಿಗಳ ಸಲಹೆಯನ್ನು ಕೇಳಿ ಸಂತುಷ್ಟನಾದ ರಾಜನು, ಶ್ರೀರಾಮನನ್ನು ಅವರೊಂದಿಗೆ ಕಳುಹಿಸಲು ಸಮ್ಮತಿಸಿದನು. ಶ್ರೀರಾಮನು ಧನುರ್ಧಾರಿಯಾಗಿ ನಿಶ್ವಾಮಿತ್ರರನ್ನನು ಸರಿಸಿ ಹೊರಬೊಡನೆಯೇ, ಲಕ್ಷ ನೂ ತನ್ನಧನುಸ್ಸನ್ನು ಭುಜದಲ್ಲಿ ಧರಿಸಿ, ಆತನ ಬೆಂಗಾವಲಿಗೆಂದು ಆತನ ಹಿಂದೆಯೇ ಹೊರಟನು,

ಹೀಗೆ ಅಯೋಧ್ಯಾ ರಾಜಧಾನಿಯಿಂದ ಹೊರಟು ಮಾರ್ಗಕ್ರಮಣ ಮಾಡಿ ಹೋಗುತ್ತಿರುವಾಗ, ವಿಶ್ವಾಮಿತ್ರ ಮುನೀಶ್ವರರು ಸುಕುಮಾರ ಶರೀರಿ ಗಳಾದ ರಾಜಪುತ್ರರಿಗೆ ಮಾರ್ಗನಡೆದುದರಿಂದ ಆಯಾಸವುಂಟಾಗದಂ ತಿರಲೆಂದು ಬಲೆ ಅತಿಬಲೆ ಎಂಬೆರಡು ದಿವ್ಯಮಂಶ್ರಗಳನ್ನು ಉಪದೇಶಿಸಿ ದರು ಅವುಗಳ ಪ್ರಭಾವದಿಂದ ಬಾಲಕರಿಗೆ ಯಾವ ಬಗೆಯ ಆಯಾ ಸವೂ ಉಂಟಾಗಣೆ, ಅವರಿಗೆ ಕ್ಷಣಕ್ಷಣಕ್ಕೆ ಉತ್ಸಾಹವೂ ಲವಲವಿಕೆಯೂ ಉಕ್ಕುತ್ತಿದ್ದುವು. ಮಾರ್ಗದಲ್ಲಿ ಶ್ರೀರಾಮನು ತಮ್ಮನ್ನು ಅಟ್ಟಿ ಕೊಂಡು ಆರ್ಭಟಿಸುತ್ತಾ ಬರುತ್ತಿದ್ದ ಶಾಟಿಕಿಯೆಂಬ ರಾಕ್ಷಸಿಯನ್ನು ವಿಶ್ವಾಮಿತ್ರರ ಆಜ್ಞಾನುಸಾರವಾಗಿ ಸಂಹೆರಿಸಿದನು. ಇದನ್ನು ಕಂಡು ಸಂತುಷ್ಟರಾದ ವಿಶ್ವಾಮಿತ್ರರು ಶ್ರೀರಾಮನಿಗೆ, ಐಂದ್ರಾಸ್ತ್ರ, ವಾರುಣಾಸ್ತ್ರ, ವಾಯವ್ಯಾಸ್ತ್ರ್ಯ ಆಗ್ನೇಯಾಸ್ತ್ಯ, ಶೂಲಾಸ್ತ್ರ, ಸನ್ಮೋಹೆನಾಸ್ತ್ರ, ಬ್ರಹ್ಮಾಸ್ತ್ರಗಳೆಂಬ ಮಹಾಸ್ತ್ರ ಗಳನ್ನೂ, ಧರ್ಮಚಕ್ರ, ದಂಡಚಕ್ರ, ಕಾಲಚಕ್ರ, ವಿಷ್ಣುಚಕ್ರವೆಂಬ ಮಹಾ ತೀಕ್ಷಗಳಾದ ಚಕ್ರಗಳನ್ನೂ, ಹಲವು ದಿವ್ಯಶಕ್ತಿಗಳನ್ನೂ ಪ್ರಯೋ ಗೋಪಸಂಹಾರಪೂರ್ವಕ ಉಪದೇಶಮಾಡಿ, ಅವುಗಳ ಅಧಿದೇವತೆಗಳ ಅನುಗ್ರಹದೊಂದಿಗೆ ಆಶೀರ್ವಾದಪೂರ್ವಕ ಒಪ್ಪಿಸಿದರು. ಶ್ರೀರಾಮನು ಸಕಲ ಮಹಾಸ್ತೃಗಳ ಮತ್ತು ದಿವ್ಯಶಕ್ತಿಗಳ ಪರಿಚೆಯವೂ ತನ್ನ ತಮ್ಮ ನಾದ ಲಕ್ಷ್ಮಣನಿಗೂ ಇರತಕ್ಕುದು ಅತ್ಯಾವಶ್ಯಕವೆಂದು ಭಾವಿಸಿ, ವಿಶ್ವಾ ಮಿತ್ರರನ್ನು ಅನುಮತಿ ಬೇಡೆಲು, ಅವರು ಅವುಗಳನ್ನು ಅಗತ್ಯವಾಗಿ ಲಕ್ಷ ವೌ ನಿಗೂ ಉಪದೇಶಿಸಬಹುದೆಂದರು, ಒಡನೆ ಶ್ರೀರಾಮನು, ಶುದ್ಧಾ ಚಮನ ಮಾಡಿ ಬಂದು ತನ್ನ ಬಳಿ ವಿನಯ.ದಿಂದ ಬದನ್ಸಿಂಬಲಿಯಾಗಿ ನಿಂತಿದ್ದೆ

ಅಕ್ಷ್ಮ್ಮಣನಿಗೆ ತಾನು ನಿಶ್ವಾಮಿತ್ರರಿಂದ ಸಡೆದಿದ್ದ ಸಕಲ ಶಸ್ತ್ರಾಸ್ತ್ರ ರಹಸ್ಯ

೧೦ ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

ಗಳನ್ನೂ ಉಪೆದೇಶಿಸಿದನು. ಲಕ್ಷ್ಮಣಸ್ವಾಮಿಯು ಸಕಲ ಮಹಾಸ್ಟ್ರ ಗಳ ಪ್ರಯೋಗೋಪಸಂಹಾರಗಳೊಂದಿಗೆ ಪರಿಚಯಹೊಂದಿ ಪ್ರಭಾವ ದಿಂದ ಅತಿಶಯ ತೇಜಸ್ವಿಯಾಗಿ ಪ್ರಕಾಶಿಸಿದನು.

ತರುವಾಯ ವಿಶ್ವಾಮಿತ್ರರು, ತಮ್ಮ ಸಿದ್ದಾ ಶ್ರಮವನ್ನು ಸೇರಿ ಶ್ರೀ ರಾಮಲಕ್ಷ ನಾರಿಗೆ ತಮ್ಮ ಯಾಗಕ್ಕೆ ವಿಘ್ನ ಕಾರಿಗಳಾಗಿ ಬರುವ ತಾಟಕಾ ಪುತ್ರರಾದ ಸುಬಾಹು ಮಾರೀಚರನ್ನು ವಧಿಸಿ ಅವರ ಬಾಧೆಯಿಂದ ಯಾಗ ಸಂರಕ್ಷಣೆ ಮಾಡಿರೆಂದು ನಿಯಮಿಸಿ, ತಾವು ಸಂಕಲ್ಪಪೂರ್ವಕ ಅಂತಮ್ಮು ಖಿಗಳಾಗಿ ಕುಳಿತರು. ಶೀರಾಮನೂ ಲಕ್ಷ ಬೌನೂ ಧನುರ್ಬಾಣಧಾರಿಗ ಳಾಗಿ, ಯಾವ ಹೊತ್ತಿಗೆ ದುಷ್ಟ ರಾಕ್ಷಸರಿಂದ ಯಾವ ತೊಂದರೆಯುಂಬಾ ಗುವುದೋ ಎಂದು, ಬಹು ಜಾಗರೂಕರಾಗಿ ಕಾದಿದ್ದರು. ಸ್ವಲ್ಪ ಹೊತ್ತಿ ನಲ್ಲೇ ಸುಬಾಹು ಮಾರೀಚರು ರಕ್ತ ಮಾಂಸ ಅಮೇಧ್ಯಾದಿ ಅಶುದ್ಧ ಪದಾ ರ್ಧಗಳನ್ನು ಅಂಕರಿಕ್ಟದಿಂದ ಹೋಮಾಗ್ನಿಯಲ್ಲಿ ಸುರಿಯಲು ಪ್ರಯತ್ನಿಸು ಕ್ತಿದ್ದ ಸುಳಿವನ್ನು ತಿಳಿದು, ಪೀರಾಮನು ತೀಕ್ಷ್ಣವಾದ ಬಾಣಗಳನ್ನು ಪ್ರಯೋಗಿಸಿ ನೀಚ ರಾಕ್ಷಸರನ್ನು ಘಾತಿಸಿದನು. ಅವರಲ್ಲಿ ಸುಬಾ ಹುವು ಬಾಣದ ವೇಗದಿಂದ ರಕ್ತವನ್ನು ಕಾರುತ್ತಾ ಒಡನೆ ಭೂಮಿಗೆ ಬಿದ್ದು ಪ್ರಾಣಬಿಟ್ಟನು. ಮಾರೀಚನು ನೂರು ಯೋಜನಗಳ ದೂರ ಹಾರಿ ಹೋಗಿ, ಲವಣ ಜಲಧಿಯ ಮಧ್ಯದಲ್ಲಿ ಬಿದ್ದನು. ಹೀಗೆ ರಾಕ್ಷಸರ ಬಾಧೆಯು ಪರಿಹಾರವಾಗಲು, ಮಹರ್ಷಿಗಳ ಯಾಗವು ಮುಂದೆ ನಿರಾತಂಕವಾಗಿ ನೆರೆ ವೇರಿತು. ವಿಶ್ವಾಮಿತ್ರರೂ, ಅವರ ಅನುಯಾಯಿಗಳಾದ ಇತರ ಹೆಲವ್ರ ಮಂದಿ ಮಹೆರ್ಹಿಗಳೂ ರಾಜಪುತ್ರರ ಪರಾಕ್ರಮಾತಿಶಯವನ್ನು ವಿಶೇಷ ವಾಗಿ ಅಭಿನಂದಿಸುತ್ತ್ಮಾ; ಅವರನ್ನು ವಿಶೇಷ ರೀತಿಯಿಂದ ಆದರಿಸಿದರು ರಾಮ ಲಕ್ಷ ನೀರೂ ಅವರ ಆದರಪೂರ್ವಕವಾದ ಸನ್ಮಾನವನ್ನು ನಿನಯ ಪೂರ್ವಕ ಸ್ನೀಕರಿಸಿ, ಇದೆಲ್ಲವೂ ತಮ್ಮ ಪ್ರಣ್ಯಪ್ರಭಾವವೆಂದು ವಿಶ್ವಾಮಿ ತ್ರರ ಅಡಿದಾವರೆಯಲ್ಲಿ ಸಮರ್ಪಿಸಿ, ನಮಸ್ಕರಿಸಿ ಅವರ ವಿಶೇಷ ಅನುಗ್ರಹೆ ಆತೀರ್ವಾದಗಳಿಗೆ ಪಾತ್ರರಾದರು.

ತಾವು ಸಂಕಲ್ಪಿಸಿದ್ದ ಯಾನವು ಮಹಾಬಾಹುವಾದ ಘಫೀರಾಮನ ಬೆಂಬಲದಿಂದ ಯಶಸ್ವಿಯಾಗಿ ನಡೆದುದಕ್ಕಾಗಿ ವಿಶ್ವಾಮಿತ್ರರಿಗೆ ಪರಮಾ

ಸೌಮಿತ್ರಿ ದಿ

ನಂದವಾಯಿತು. ಸಂತೋಷದಲ್ಲೇ ಅವರು ಮಾತುಕಥೆಗಳಸ್ನಾಡುತ್ತ ಕುಳಿತಿರುವ ವೇಳೆಗೆ ಸರಿಯಾಗಿ, ಮಿಥಿಲಾನಗರಿಯ ಅಧಿಪತಿಯಾದ ಜನಕ ರಾಜರ್ಹಿಯಿಂದ ತವ್ಹಿ ಮಗಳಾದ ಜಾನಕಿಯ ಸ್ವಯಂವರಕ್ಕಾಗಿ ದಯ ಮಾಡಿಸಬೇಕೆಂದು ಸ್ವಯಂವರ ಮಹೋತ್ಸವಾಹ್ವಾನ ಪತ್ರಿಕೆಯು ತಲು ನಿತು, ಅದನ್ನು ಕಂಡು, ಪ್ರಿಕಾಲಜ್ಞಾನಿಗಳಾದ ಮಹರ್ಷಿಗಳು, ಜಾನಕಿಯನ್ನು ಶೀರಾಮನಿಗೆ ಘಟನೆಮಾಡಿಸುವ ಸುಯೋಗವನ್ನು ಕಲ್ಪಿಸ ಬೇಕೆಂದು, ತಮ್ಮ ಸಕಲ ಪರಿವಾರಗಳೊಂದಿಗೂ, ಶೀರಾಮಲಕ್ಷ ರೊಂ ದಿಗೂ ಜನಕರಾಜಧಾನಿಗಾಗಿ ಪ್ರಯಾಣವಾಗಿ ಹೊರಟರು, ಮಾರ್ಗದಲ್ಲಿ ಮಹರ್ಷಿ ಗೌತಮರ ಶಾಪದಿಂದ ಪಂಚೇಂದ್ರಿಯಗಳ ಶಕ್ತಿಯೂ ಉಡುಗಿ ನಿಶ್ಚೇಷ್ಟ್ರಿತಳಾಗಿ ಶಿಲೆಯೋ ಎಂಬಂತೆ ಬಿದ್ದಿದ್ದ ಅಹೆಲ್ಯಾದೇವಿಯನ್ನು, ಶೀರಾಮನು ವಿಶ್ವಾಮಿತ್ರರ ಪ್ರೇರಣೆಯನ್ನ ನುಸರಿಸಿ ತನ್ನ ಸಾದಾಂಗುಟಿದ ಸ್ಪರ್ಶಮಾತ್ರದಿಂದ ಸಚೇತನಳನ್ನಾಗಿಸಿದನು. ತರುವಾಯ ಮಿಥಿಲಾನಗ ರಕ್ಕೆ ಬಂದು ಸೇರಿದ ಅವರು ಜನಕರಾಜನಿಂದ ಸತ್ಯೃೃತರಾಗಿ ತಮಗಾಗಿ ಏರ್ಪಟ್ಟಿದ್ದ ಬಿಡಾರಗಳಲ್ಲಿ ವಿಶ್ರಮಿಸಿಕೊಂಡರು.

ಒಂದು ದಿನ ರಾಮಲಕ್ಷ ಟಾರು ವಿಶ್ವಾಮಿತ್ರರ ಅಪ್ಪಣೆಯನ್ನು ಪಡೆದು ನಗರ ಸಂದರ್ಶನಕ್ಕಾಗಿ ಹೊರಟರು. ನಗರದ ಹಲವು ಸುಂದರ ದೃಶ್ಯ ಗಳನ್ನು ನೋಡಿಕೊಂಡು ಹಿಂದಿರುಗುವುದು ಬಹು ಹೊತ್ತಾಯಿತು. ವಿಶ್ವಾ ಮಿತ್ರರು ಎಲ್ಲಿ ಕೋಪಿಸುವರೋ ಎಂದು ಶ್ರೀರಾಮಲಕ್ಷ್ಮಣರು ಶಂಕಿಸುತ್ತಾ ಅವರ ಸನ್ನಿಧಿಯನ್ನು ಸೇರಿ ಭಯಭಕ್ತಿಗಳಿಂದ ವಂದಿಸಿ, ಕೈಜೋಡಿಸಿ ನಿಂತುಕೊಂಡರು. ರಾಜಕುವರರ ವಿನಯ ವಿಧೇಯತೆಗಳಿಗಾಗಿ ಸಂ ತೋಷಿಸಿದ ವಿಶ್ವಾಮಿತ್ರರು, ಅವರಿಗೆ ನಿಶ್ರಮಿಸಿಕೊಳ್ಳಲು ಹೇಳಲು, ಅವರು ಸ್ವಲ್ಪಹೊತ್ತು ಕುಳಿತ, ತರುವಾಯ ಸಾಯಂಸಂಧ್ಯಾವಂದನೆಯನ್ನು ತೀರಿಸಿ, ಆಹಾರ ಸ್ವೀಕಾರಮಾಡಿದರು. ರಾತ್ರೆ ಮಹರ್ಷಿಗಳ ಮುಖದಿಂದ ಅಪೂರ್ವವಾದ ಪುರಾತನ ಸಂಗತಿಗಳನ್ನು ಕೇಳಿ ಆಶ್ಚರ್ಯಗೊಳ್ಳುತ್ತ ಶ್ರೀ ರಾಮಲಕ್ಷ ಬಾರು ಅವಂ ದಿವೈಚರಣಗಳನ್ನೊತ್ತುತ್ತ ಸ್ವಲ್ಪಹೊತ್ತು ಕುಳಿ ತಿದ್ದು, ಆಮೇಲೆ ಅವರ ಪಾದದ ಬಳಿಯಲ್ಲೇ ಮಲಗಿ ನಿಡ್ರೆ ಹೋದರು. ಲಕ್ಷ i ಣನು ಕೇವಲ ಹದಿನೈದು ವರ್ಷಗಳ ಬಾಲಕನಾದರೂ, ತಮ್ಮಣ್ಣನಾದ

೧೨ ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

ಶ್ರೀರಾಮನ ವಿಷಯದಲ್ಲಿ ಅನನ್ಯಭಕ್ತಿ ಶ್ರದ್ಧೆಗಳನ್ನುಂಟಾಗಿ ಆತನ ಪಾದ ಗಳನ್ನೇ ಧ್ಯಾನಿಸುತ್ತ ಮಲಗಿ ನಿದ್ರೆ ಹೋದನು, ಪ್ರಾತಃಕಾಲವಾಗುತ್ತಿರ ಲು ಮೊದಲು ಲಕ್ಷ ನು ಎಚ್ಚರಗೊಂಡು, ಶ್ರೀರಾಮನಿಗೆ ಶೌಚ-ಸ್ನಾನಾದಿ ಗಳಿಗೆ ಸಿದ್ಧಗೊಳಿಸುವಷ್ಟರಲ್ಲಿ ಶ್ರೀರಾಮನೂ ಎದ್ದು ಸ್ನಾನಸಂಧ್ಯಾದಿಗಳನ್ನು ತೀರಿಸಿಕೊಂಡು ಬಂದು ಗುರುದರ್ಶನಮಾಡಿ, ಪಾದಗಳಿಗೆ ನಮಸ್ಕರಿಸಿದರು, ಹೀಗೆ ತಾವು ಮಹಾರಾಜಾಧಿರಾಜನ ಮಕ್ಕಳಾಗಿದ್ದರೂ ರಾಮಲಕ್ಷ ಬಾ ರು ಗುರುಜಫರಲ್ಲಿ ವಿನಯ ವಿಧೇಯತೆಯಿಂದ ನಡೆದು ಸಕಲರಿಗೂ ಮಾರ್ಗ ದರ್ಶಕರಾದರು.

ವಿಶ್ವಾಮಿತ್ರರೊಂದಿಗೆ ರಾ 3ಸ್ಥಾನಕ್ಕೆ ಕರತರಲ್ಪಟ್ಟಿ ಶ್ರೀರಾಮ ಲಕ್ಷ ರನ್ನು ಕಂಡು ಜನಕರಾಜನು, ಅವರ ತೇಜಸ್ವಿತೆಗಾಗಿ ಪರಮಾನಂದ ಪೆಟ್ಟಿ ನು, ತನ್ನ ಪುತ್ರಿಯಾದ ಸೀತಾದೇವಿಯನ್ನು ಅವರಲ್ಲಿ ಹಿರಿಯನಾದ ಶ್ರೀರಾಮನಿಗೆ ಕೊಟ್ಟು ವಿವಾಹಮಾಡುವ ಇಚ್ಛೆಯು ಆತನಿಗೆ ವಿಶೇಷವಾಗಿ ಮನಸ್ಸನ್ನು' ಬಾಧಿಸಿತಾದರೂ ಕ್ಷತ್ರಿಯನಾದ ಆತನು ಮೊದಲೇ ಮಾ ಡಿದ್ದ ಪ್ರತಿಜ್ಞೆಗೆ ಬದ್ಧನಾಗಿ ನಡೆಯ ಬೇಕಾಯಿತು. ಮುಂದೆ ಸ್ವಲ್ಪಹೊತ್ತಿ ನಲ್ಲೇ ಆತನ ಅಜ್ಜಿಯಿಂದ ಅಗಾಧವಾದ ಶೈವಧನುಸ್ಸು ಸ್ವಯಂವರ ಮಂಟಪದ ಮಹಾಸಭೆಯಲ್ಲಿ, ನೆರೆದ ಸಕಲ ರಾಜಲೋಕದ ಸಮ್ಮುಖಕ್ಕೆ

ತಂದಿಡಲ್ಬಟ್ಟಿ ತು.

"ಪ್ರ ಶೈವ ಧನುಸ್ಸನ್ನು ಹೆದೆಯೇರಿಸಿ ನಾಣುಬಿಗಿದ ವೀರನು ಜಾನ ಕಿಯ ಪಾಣಿಗ್ರಹಣ ಮಾಡಬಹುದು' ಎಂದು ಜನಕರಾಜನು ಸಭೆಯಲ್ಲಿ ತನ್ನ ಪ್ರತಿಜ್ಞೆಯನ್ನು ಪ್ರಕಟಗೊಳಿಸಿದನು, ಅದನ್ನುಕೇಳಿದ ರಾಜಪುತ್ರ ರನೇಕರು ನಾನು ಮುಂದೆ ತಾನು ಮುಂದಿಂದು ದೀಪಕ್ಕೆರಗುವ ಶಲಭ ಗಳಂತೆ ಧನುಸ್ಸಿನ ಬಳಿಗೆಬಂದು, ಅದನ್ನು ಅಗುಲಾಡಿಸಲೂ ಶಕ್ತಿ ಸಾಲದೆ ಅವಮಾನಗೊಂಡು ಹಿಂತೆರಳಿದರು. ಪರಿಸ್ಥಿತಿಯು ಜನಕರಾಜನಿಗೆ ಬಹು ಬೇಸರವನ್ನು ಂಟುಮಾಡಿತು. ಆಗ ಆತನು-"ಇದೇನಿದು, ಭೂಮಿಯು ನಿರ್ನೀರ್ಯವಾಯಿತೇ! ಸಭೆಯಲ್ಲಿ ಧನುಸ್ಸನ್ನು ಎತ್ತಿ ನಾಣೇರಿ ಸುವ ವೀರನಾವನೂ ಇಲ್ಲವೆ? ಎಂದು ಗರ್ಜಿಸಿದನು.

3] ಸೌಮಿತ್ರಿ ೧ಷ್ಠಿ

ಲಕ್ಷ್ಮಣನಿಗೆ ಶ್ರೀರಾಮನಲ್ಲಿದ್ದ ಭಕ್ತಿಯೆಂಬುದು ಅತುಲನೀಯ. ಆತನು ಏನನ್ನಾದರೂ ಸಹಿಸುವನು; ಆದರೆ ಶ್ರೀರಾಮನಿಗಾದ ಅಪಮಾನ, ತಿರಸ್ಕಾರ, ದುಃಖ ಇವುಗಳನ್ನು ಮಾತ್ರ ಸಹಿಸಲಾರನ್ನು ಈಗ ಜನಕ ರಾಜನು ಜಗದೇಕ ವೀರನಾದ ಶ್ರೀರಾಮನೆದುರಿಗೆ - "ಏನು ಭೂಮಿಯು ನಿರ್ವೀರ್ಯವಾಯಿತೆ? ಸಭೆಯಲ್ಲಿ ವೀರನಾವನೂ ಇಲ್ಲವೆ? ಎಂದು ನುಡಿದ ಮಾತುಗಳು ಆತನಿಗೆ ಅಸಹ್ಯವೇದನೆಯನ್ನುಂಟುಮಾಡಿದುವು, ಒಡನೆ ಬಾಲವೀರನು ಘುಡಿಘುಡಿಸುತ್ತಾ ಮೇಲಸೈೈದ್ದು, -" ರಘುವಂಶ ಪ್ರವರನಾದ-ನಮ್ಮಣ್ಣನಾದ ಶ್ರೀರಾಮನು ಕೋದಂಡಧಾರಿಯಾಗಿ ಸಭಿ ಯಲ್ಲಿ ಕುಳಿತಿರುವಾಗ - ಧರೆಯು ನಿರ್ನೀಯವಾಯಿತೇ - ಸಭೆಯಲ್ಲಿ ವೀರ 8ಬಿವೆ? ಎಂದು ನುಡಿಯುವವರು ಬಹು ಸಾಹೆಸದ ಮಾತುಗಳನ್ನಾ ಡಿರು ವರು. ಆತನ ಅಜ್ಜಿಯಿಲ್ಲದುದರಿಂದ ನಾನು ಕುಳಿತಿರಬೇಕಾಗಿದೆ, ಇಲ್ಲ ದಿದ್ದಲ್ಲಿ ಬಿಲ್ಲನ್ನು ಜಯಿಸುವುದು ಎಷ್ಟರ ಕಾರ್ಯವು' ಎಂದು ಆರ್ಭಟಿಸಿ ದನ್ನು ಬಾಲವೀರನ ನುಡಿಯನ್ನು ಕೇಳಿ ರಾಜಲೋಕವು ಬೆದರಿ ನೋಡಿ ತು. ಭೂಮಿಯು ಕಂಪಿಸಿದಂತಾಯಿತು. ಸೀತೆಯ ಹೃದಯ ಕಮಲವು ವಿಕ ಸಿತವಾಯಿತು. ಜನಕರಾಜನಿಗೆ ಪುನಃ ಆಸೆಯುದಯಿಸಿತು. ವಿಶ್ವಾಮಿತ್ರ ರಾದಿಯಾಗಿ ಸಕಲ ಮುರಿಗಣವೂ ರೋಮಾಂಚಗೊಂಡು ಆನಂದಬಾಷ್ಪ ವನ್ನುದುರಿಸಿದರು. ಎಲ್ಲರೂ ಕಡೆಗೆ ತಿರುಗಿ, ತೇಜಸ್ವಿಯಾದ ಶ್ರೀರಾಮ ನನ್ನೂ ಆತನ ಆಜಾನುಬಾಹುಗಳನ್ನೂ ವಿಶಾಲ ವಕ್ಷಸ್ಥಲವನ್ನೂ ಮಹಾ ಪುರುಷ ಲಕ್ಷಣಗಳನ್ನೂ ನೋಡಿ, ವೀರನಿಗೆ ಧನುಸ್ಸು ಸ್ವಾಧೀನವಾದರೂ ಆಗಬಹುಹು ಎಂದುಕೊಂಡರು. ಸಂದರ್ಭವನ್ನುತಿಳಿದು ವಿಶ್ವಾಮಿತ್ರರೂ ಕಣ್ಣುಸಂಚ್ಲೆಯಿಸಂದ ರಾಮನಿಗೆ ಅನುಮತಿಕೊಟ್ಟರು.

ಒಡನೆ ಮಹಾಬಾಹುವಾದ ಶ್ರೀರಾಮನು ಲಕ್ಷ ಟಾನನ್ನು ಹಸನ್ಮುಖ ದಿಂದ ಆದರಿಸಿ ಕುಳ್ಳಿರಿಸಿ ಬಾಹುಬಲಶಾಲಿಗಳಾದ ಹಲವು ಮಂದಿ ರಾಜ ರಿಗೇ ಅಸಾಧ್ಯವೆನ್ನಿಸಿ- ಅವಮಾನಗೊಳಿಸಿದ್ದ ಧನುಸ್ಸನ್ನು ಅವಲೀಲೆ ಯಿಂದ ಎತ್ತಿ ಅದಕ್ಕೆ ನಾಣೇರಿಸಲು ಪ್ರಯತ್ನಿಸುತ್ತಿರಲು, ಬಿಲ್ಲು ಮಧ್ಯಕ್ಕೆ ಎರಡು ತುಂಡಾಗಿ ಮುರಿದುಹೋಯಿತು, ಅದನ್ನು ಕಂಡು ಅಂತರಿಕ್ಷದಲ್ಲಿ ದೇವತೆಗಳು ಶೀರಾಮನಮೇಲೆ ಪುಷ್ಪವೃಷ್ಟಿಯನ್ನು ಕರೆ

೧೪ ಸುಬೋಧ ಕುಸುಮಾಂಜಭಿ '೦ಥಮಾಲಾ

ದರು. ಸಕಲ, ಖ.ಸಿಮುನಿಗಳೂ ನೆರೆದ ಬ್ರಾಹ್ಮಣೋತ್ತಮರೂ ಜಯ ಜಯವೆಂದು ಜಯಘೋಷಮಾಡಿ ಆಶೀರ್ವದಿಸಿದರು. ಭನುಸ್ಸಿಗೆ ನಾಣೇ ರಿಸಿ ಕಚ್ಚಿದ ವೀರನನ್ನು ವರಿಸಬೇಕೆಂದು ಪುಷ್ಪಹಾರವನ್ನು ಹಿಡಿದು ನಿಂತಿದ್ದ 2... ನಸು ಲಬ್ಬೆಯಿಂದ ಬೆರೆದು ನಪ ಮನ್ಮ ಥಾಕಾರ ನಾದ ತನ್ನ ಪ್ರಾಣನಾಧನ ಕಂಠದಲ್ಲಿ ದಿವ್ಯ ಪುಷ್ಪಹಾರವನ್ನು ಸಮರ್ಪಿ ಸಿವಳು.,

ಜನಕಮಹಾರಾಜನೂ, ನೆರೆದ ಸಕಲ ಮುನಿವೃ ಂದವೊ ರಾಜಲೋ ಕವೂ ಪಾ ಅನುರೂಪ ದಾಂಪತ್ಯ ವನ್ನು ಸರಮಸಂತು ಪ್ಟರಾದರು. ಜನಕರಾ ಜಫಿಗೆ, ಯಜ ಭೂಮಿಯಲ್ಲಿ ದೊರೆತ ಸೀತಾದೇವಿ ಯಲ್ಲದೆ, ಸ್‌ ಎಂತ ಭಾಯಿ. 1 ಗರ್ಭದಲ್ಲಿ ಜಥಿಸಿದ ಮತ್ತೊಬ್ಬ ಮಗಳೂ ಇದ್ದ ಛು ಸಕ ಆತನ ತಮ್ಮನಿಗೂ ಇಬ್ಬರು ಹೆಣು ಮಕ್ಕ ಳಿದ್ದು ಅವರೂ ವಿವಾಹಯೋ ಗ್ಯ ವಯಸ್ಕರ ರಾಗಿದ ರು. 6 ನಾಲ್ವರು ಕನ್ಯೆ ಯರ. ವಿವಾಹಗಳನ್ನೂ ಒವೆ; ಗೇ ಮಾಡಬೇಕೆಂದು ಆತನಿಗೆ 2೫ ಳಿಂದಲೂ ಮಸ್ಸಿದ ತ. ವಿಶ್ವಾಮಿತ್ರರಿಂದೆ ಶೀರಾಮಚಂದ್ರನಿಗೆ ಲಕ್ಷ್ಮಣನಲ್ಲದೆ ಮತ್ತಿ » ತಮ್ಮಂದಿರೂ ಇರುವರೆಂಬ ವಾರ್ತೆಯನ್ನು ಕೇಳಿದ ಆತನ: bt ಸಕಲ ಪರಿವಾರಯುಕ್ತರಾಗಿ ಹೊರ ಟುಬಂದು ತನ್ನ ಮನೆಯ ನಾಲ್ಮಮಂದಿ ಕನೈಯರನ್ನೂ ನಿಮ್ಮ ನಾಲ್ತು ಮಂದಿ ಪುತ ನನ್ನನ್ನು ಶತಾರ್ಥನನ್ನಾಗಿಸಬೇ ಎಂಬ

ವಿವಾಹ ಮಹೋತ್ಸ ವಾಹಾ ಪತ್ರಿಕೆ

ಯನ್ನು ಬರೆಯಿಸಿ ಕಳುಹಿಸಿದ

ವಿಶ್ವಾವಿ ಬಹ ಸಾದಚಾರಿಗ್ರಳಾಗಿ ಹೋದ ತನ್ನ ಸುಕುಮಾರರೇನಾದರೋ ಎಂಬ ಚಿಂತೆಯಿಂದ ಸೊರಗುತ್ತ ಕುಳಿತಿದೆ ದಶರಧನಿಗೆ, ಜನಕರಾಜೀಂದ್ರನ ದೂತರು ಮೇಲ್ಮ ೦ಡ ಲಗ್ನ ಪತಿ ್ರಿಕೆಗಳನ್ನು ತಲುಪಿಸಿದರು, ಅವುಗಳಲ್ಲಿದ್ದ ಒಕ್ಕಣೆಯ ನ್ನ ಡಿ ಕೇಳಿದ ರಾಜನ ಮನಸ್ಸಿನಲುಂಬಾದ ಆನಂದೋದ್ರ್ವೇಗದ ಪ್ರಮಾ ನಿಷ್ಟ ದು ತಿಳಿಯುವ ನಾರು? ವಿವರಿಸುವನಾರು? ಒಡನೆ ಸಂತೋಷವಾರ್ತಿಯನ್ನು ತನ್ನ ಮೂವರು ರಾಣಿಯರಿಗೂ ತಿಳಿಸಿ ಸಕಲ ಪರಿವಾರವೂ Re

|

ಸೌಮಿತ್ರಿ ೧೫

ವಿವಾಹಕ್ಕಾಗಿ ನಿಥಿಲಾನಗರಿಗೆ ಪ್ರಯಾಣಮಾಡಬೇಕೆಂದು ಆಜ್ಞಾ ಪಿಸಿ ದನು. ಮೊಂತಿ ಗಳು ರಾಜಾಜ್ಞೆ ಯಿಂದ ಸಕಲ ಸಾಮಗ್ರಿಗಳನ್ನೂ ಸಿದ್ಧಪ ಡಿಸಿ ಯಾಣಕ್ಕೆ ಸನ್ನ ಡ್ಭ ರಾದರು.

ಬಹುದೂರ ಬ್‌ ಶೀಘ್ರದಲ್ಲೇ ಕಳೆದು ತನ್ನ ರಾಜಧಾನಿ ಬಳಿಗೆ ಬಂದ ದಶರಥಸಾರ್ವಭೌಮನನ್ನು ಉಚಿತಪ್ರಕಾರದಿಂದ ಕಂಡು ಆದರಿಸಿ ಜನಕರಾಜೀಂದ್ರನು ಯೋಗ್ಯ ಬಿಡಾರಗಳಲ್ಲಿಳಿಸಿ ಉಪಚರಿಸಿದನು. ತರುವಾಯ ಉಭಯ ರಾಜರುಗಳೂ ಉತ್ಪಾಹೆವಂತರಾಗಿ ನಡೆಯಿಸಲು ಇಚ್ಛಿ ಸಿದ್ದಂತೆಯೇ ವಿವಾಹಾಂಗವಾದ ಸಕಲ ಮಹೋತ್ಸವಗಳೂ ಪ್ರಾರಂ ಭವಾದುವು್ರ, ಜನಕರಾಜನು ವೀರ್ಯಶುಲ್ಕ*ಾದ ಜಾನಕೀದೇವಿಯನ್ನು ಹತ್ವಾ ಒಗದೇಕವೀರನಾದ ಪೀರಾಮಚಂದ್ರನಿಗೂ, ತನ್ನ ಸಂತ ಮಗಳಾದ ಊರ್ಮಿಳಾದೇವಿಯನ್ನು ಲಕ್ಷ್ಮಣಸ್ವಾಮಿಗೂ, ತನ್ನ ಮಕ್ಕಳಾದ ಮಾಂಡವೀಶು ಕಕೀತಿಯರಂಬಬ್ಬ ಷ್ಟ Rs. ಮಣಿಯರನ್ನು $n ಭರತ ಶತ್ರುಫ್ನರಿಗೂ ಕೊಟ್ಟ ಸಕ ಸಜ್ಜನ ಸಮ ತವಾದ. ರೀತಿಯಲ್ಲಿ ನಿಶೇಷ ವೈಭವದಿಂದ ವಿವಾಹ Fe ವನ್ನು ನೆರೆವೇರಿಸಿದನು. ಕನ್ಯಾದಾನದೊಂದಿಗೇ ಸತ್ಕಾತ್ರಗಳಲ್ಲಿ ಗೋ ಭೂ ಹಿರಣ್ಯಾದಿ ಸಕಲ ದಾನಗಳೂ ಯಧಾನಿಧಿಯಾಗಿ ಸಮರ್ಪಿಸಲ್ಪ ಟ್ಟುವು. ಸಕಲರೂ ಅನ್ನದಾನ ವಸ್ತ್ರದಾನಾದಿಗಳಿಂದ ಪರಮಸಂತುಷ್ಟ ರಾದರು.

oo ಅಧ್ಯಾಯ "ವನವಾಸ?

ನಿನಾಹಾಂಗವಾದ ಸಕಲ ವೈಭವಗಳೂ ಮುಗಿದ ತರುವಾಯ, ದಶ ರಥರಾಜೇಂದ್ರ ನು ಸಕಲ ಪರಿವಾರಯುಕ ನಾಗಿ, ಜನಕರಾಜನ ಅನ:ಮತಿ ನಡೆದು, ತನ್ನ ರಾಜಧಾನಿಯಸ್ನು ಕುರಿತು ಪ್ರಯಾಣಮಾಡಿ ದನು, ಮಾರ್ಗ ಮಧ್ಯದಲ್ಲಿ, "ಸ್ಟ ತ್ಕೊಂದು ಸಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯ ವಂಶ

೧೬ ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

ವನ್ನು ನಿರ್ಮೂಲಗೊಳಿಸಿದ ಪೆರಕ.ರಾಮನು ಅವರಿಗೆ ಎದುರಾಗಿ, ಅಡ್ಮೆಗೆ ಟ್ವದನು. ಆತನನ್ನು ಕಂಡು ದಶರಥರಾಜನು ನಡುಗಿ ಹೋದನು, ಆಗ ಶ್ರೀರಾಮನು, ತನ್ನ ತಂದೆಯನ್ನು ಸಮಾಧಾನಗೊಳಿಸಿ, ಪರಶುರಾಮನು ತಂದುಕೊಟ್ಟ ವೈಷ್ಣವ ಧನುಸ್ಸನ್ನು ಭಂಗಿಸಿ, ಒಂದಿಗೇ ಆಕನ ಸತ್ವವೆಬ್ಲ ವನ್ನೂ ಅಪಹರಿಸಿಬಿಟ್ಟಿ ನು ಪರಶುರಾಮನು ಸಾಕ್ಟ್ರಾದ್ವಿಷ್ಟುವೇ ನರಾವ ತಾರದಲ್ಲಿ ರಾಮರೂಪೆದಿಂದ ಬಂದಿರುವನೆಂಬುದನ್ನು ತಿಳಿದು ಪರಮ ಸಂತು ಸ್ಪನಾಗಿ, ಅಭಿನಂದಿಸಿ, ಕಳುಹಿಸಿಕೊಟ್ಟನು ತರುವಾಯ ಸಕಲರೂ ಸುಖ ಪ್ರಯಾಣಮಾಡಿ ಆಯೋಧ್ಯಯನ್ನು ಸೇರಿದರು. ಅಯೋಧ್ಯೆಯಲ್ಲಿ ಶೀರಾಮಾದಿಗಳು ತಮ್ಮ ತಮ್ಮ ಅರಮನೆಗಳಲ್ಲಿ ಮ್ಮ ಪತ್ನಿ ಯಕೋಂದಿಗೆ ವಾಸಿಸುತ್ತ, ಸಕಲ ದಾಂಪತ್ಯ 'ಭೋಗಗಳನೂ, Ri 3 ಎಂಟು ವಷಇಗಳಷ್ಟು ಕಾಲವನ್ನು 4 ಖು ಸಂತೋ ಸಗ ಳಿಂದ ಕಳೆದರು. ಮುಂಡೆ ಕೆಲವು ಜನಗಳು ಇಪ) ಭರತನು ತನ್ನ ಸೋದರಮಾವನ ಊರಿಗೆ ಹೊರಟು ಹೋದನು, ಅವನನ್ನು ಅನುಸರಿಸಿ ಶತ್ತುಘಫ್ಲನೂ ಪ್ರಯಾಣಮಾಡಿವನ:, ಅದರೆ ರಾಮನನ್ನು ದೇಹೆದೆ ನೆಳಲೋ ಎಂಬಂತಿ ಆಶ್ರಯಿಸಿಕೊಂಡಿನ್ನ ಲಕ್ಷ್ಮಣನು, ಸದಾ ಶಿ'ರಾಮನ ಸೇವೆಯಲ್ಲೆ ನಿರತನಾಗಿ ಆತನ ಜ್‌ ಇಸುತ್ತಿ ದ್ದೆ ನು ರಾವ.ನಲ್ಲಿ ಆತನ ಸ್ನ ಹೆ ಪ್ರೇಮಗಳು ಎಷ್ಟವ. ಬ್ರ ಗಿದೆ. ವೆಂದರೆ ಶೀರಾಮನಿಲ್ಲದಿ ದ್ದ ಲ್ಲಿ ಅವನಿಗೆ ಆಹಾರವು ರುಚಿಸದ.,, ನಿಬ್ರೆ ಬಾರದು, ಜೀವನವೇ ಭಾರ ವೆರಬಂತೆ ತೋರುವುದು. ದಶರಥ ರಾಬೀಂದ್ರನು ತನಗೆ ಅಧಿಕ ವಯಸ್ಸಾದುದರಿಂದ, ಇನ್ನು ತನ್ನ ಜ್ಯೇಷ್ಠಪುತ್ರ ನೂ ಸಕಲ ಸದ್ದು ಜೂ ಆದೆ ಶ್ರೀರಾಮ ಚಂದ್ರನಿಗೆ ಯಾವರಾಜ್ಯಾಭಿಸೇಕಮಾಡಿ, ರಾಜ್ಯಭಾರವನ್ನು ಒಪ್ಪಿ ಸಬೇ ಕೆಂದಿದ್ದ ತನ್ನ ಅಭಿಪ್ರಾಯವನ್ನು ಆಪ್ತರಾದ ಮಂತ್ರಿ ವರ್ಗವನ್ನೂ ಪ್ರಜಾ ಪ್ರಮ. ಖರನ್ನೂ ಕರೆಸಿ, ಅವರಿಗೆ ತಿಳಿಸಿದನು. ಅವರೆಲ್ಲರೂ ಜ್‌ ಯನ್ನು ಕೇಳಿ ಪರಮ ಜವ ಶ್ರೀರಾಮಚಂದ್ರನಿಗೆ ಯಾವ ರಾಜ್ಯಾಭಿಷೇಕಮಾಡಿ, ರಾಜ್ಯಭಾರ ವನ್ನು ಒನ್ಬಿಸಬಹುದೆಂದು ತಮ್ಮ ಅನು ಮತಿಯನ್ನು ಸೂಚಿಸಿದರು, ಅಭಸೇಕಸ | ಗಳಲ್ಲ ಸಿದ್ಧವಾಗಿ, “ಮಾರ

ಸೌಮಿತ್ರಿ ೧೭

ನೆಯ ದಿನವೇ ಮಹೋತ್ಸವವು ನಡೆಯತಕ್ಕದ್ದೆಂದು ಪ್ರಕಟಗೊಳಿಸ ಲ್ಪಟ್ಟಿತು,

ಸಂದರ್ಭದಲ್ಲಿ ಅರಮನೆಯ ಅಂತಃಪುರದಲ್ಲಿ ಒಂದು ದುರಂತೆ ಪ್ರಸಂಗವು ನಡೆಯಿತು. ಧೂರ್ತಳಾದ ಮಂಥರೆಯ ವೈೇರಣೆಯಿಂದ ಕ್ಪಕೇ ಯಿಯು ದಶರಥರಾಜನನ್ನು ತನ್ನ ಮಾತುಗಳ ನಿರ್ಬಂಧಕ್ಕೆ ಒಳಪಡಿಸಿ ಕೊಂಡು ಪೂರ್ವದಲ್ಲಿ ತನಗೆ ಕೊಟ್ಟಿದ್ದ ಎರಡು ವರಗಳಲ್ಲಿ ಒಂದಕ್ಕೆ ಶ್ರೀ ರಾಮನನ್ನು ಹೆದಿನಾಲ್ಕು ವರ್ಷಕಾಲ ಅರಣ್ಯವಾಸಕ್ಕೆ ಕಳುಹಿಸಬೇಕೆಂದೂ ಮತ್ತೊಂದಕ್ಕೆ ತನ್ನ ಮೆಗನಾದೆ ಭರತನಿಗೆ ಅಯೋಧ್ಯೆಯಲ್ಲಿ ಯೌವ ರಾಜ್ಯಾಭಿಷೇಕಮಾಡಿ ರಾಜ್ಯಭಾರವನ್ನು ಒಪ್ಪಿ ಸಿಕೊಡಬೇಕೆಂದೂ, ವಾಗ್ದಾನ ಪಡೆದಳು ವೃದ್ಧ ನಾದ ದಶರಥರಾಜೀಂದ್ರನು ತಾನು ಕೊಟ್ಟಿ ವಾಕ್ಯಕ್ಕೆ ವ್ಯತಿರಿಕ್ತವಾಗಿ ನಡೆಯಲಾರದೆಯೂ, ತನಗೆ ಬಹಿಃಪ್ರಾಣವೋ ಎಂಬಂತಿದ್ದ ಶ್ರೀರಾಮನನ್ನು ಅಗಲಿರಲು ಇಷ್ಟವಿಲ್ಲದೆಯೂ ತೊಳಲಲಾರಂಭಿಸಿದನು. ಸ್ವಲ್ಪಹೊತ್ತಿನಲ್ಲೇ ವಾರ್ತೆಯು ಶ್ರೀರಾಮನಿಗೆ ತಿಳಿಯ ತ್ತು. ಲಕ್ಷ ಟೌ ನಾದರೋ ತಮ್ಮಣ್ಣನಾದ ಶ್ರೀರಾಮನಿಗೆ ರಾಜ್ಯಾಭಿಸೇಕವಾಗುವುದೆಂಬ ವಾರ್ತೆಯನ್ನು ಕೇಳಿ, ಹಿಡಿಸಲಾರದಷ್ಟು ಆನಂದಗೊಂಡಿದ್ದನ್ನು ತಮ್ಮಣ್ಣ ನಾದ ಶ್ರೀರಾಮನು ರಾಜಸಿಂಹಾಸನದಮೇಲೆ ಶ್ರೇತಚ್ಛತ್ರದಡಿಯಲ್ಲಿ ಕುಳಿತು ಮಂತ್ರಿ ಸಾಮಂತರಿಂದ ಗೌರನಿಸಲ್ಪಡುವುದನ್ನೂ ಪ್ರಬೆಸರಿವಾರಗಳನ್ನು ಮಕ್ಕಳಂತೆ ಪ್ರೇಮದಿಂದ ಪಾಲಿಸುವುದನ್ನೂ ನೋಡಬೇಕೆಂದು, ಆತನಿಗೆ ಮಹೆದಾಶೆಯವಿದ್ದಿತು. ಆದರೆ ತೀರಾಮನಿಗೆ, ಕೈಕೇಯಿಯ ಮಾತಿಗೆ ಧೀನನಾದ ದಕರಥನಿಂದೆ ವನವಾಸಕ್ಕಾಗಿ ಆಜ್ಲಿಯಾಯಿತೆಂದು ಕೇಳಿಡೊಡೆ ಡನೆಯೇ ಅವನ ಆಸೆಯೆಲ್ಲಾ ನಿರಾಕೆಯಾಯಿತ್ತು ಉತ್ಸಾಹವು ಅಡೆಗಿ ಹೋಯಿತು. ಮೊದೆಲಿದ್ದ ಸಂತೋಷದ ಸ್ಥಾನವನ್ನು ರೋಷವು ಆಕ್ರಮಿ ಸಿತು. ಲಕ್ಷಣನಿಗೆ ಶ್ರೀರಾಮನಲ್ಲಿ ಅತಿಶಯ ಪ್ರೇಮವಿದ್ದಿತು. ನಿಜ ಆದರೆ ರಘೌವಂಶಕ್ಕೆ ಜ್ಯೇಷ್ಠ ಪುತ್ರನಾದ ತಾನು ರಾಜಸಿಂಹಾಸನಕ್ಕೆ ತನಗಿದ್ದ ಬಾ ಧ್ಯತೆಯನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಟ್ಟಿ ನಲ್ಲಾ, ಅದು ತಪ್ಪೆ ಎಂಬುದು ಅವನ ಅಭಿಪ್ರಾಯವಾಗಿತ್ತು. ಲಕ್ಷ್ಮಣದೇವನ ಸ್ವಭಾವವು ಬಹು ಖಂಡಿತ ಪ್ರಕೃತಿಯದು! ತನ್ನ ಮನಸ್ಸಿಗೆ ಸರಿಯೆಂದು ತೋರಿದುದನ್ನು ಸ್ಪಷ್ಟ ವಾ

೧೮ ಸುಬೋಧೆ ಕುಸುಮೊಂಜಲಿ ಗ್ರಂಥಮಾಲಾ

ಡಿ

ಕೃಗಳಿಂದ ಹೇಳಿಚಿಡುವನು, ಅನೇಕ ಸಂದರ್ಭಗಳಲ್ಲಿ ಶ್ರೀರಾಮನ ವಾಕ್ಯಗೆ ಳನ್ಸೇ-ಅಭಿಪ್ರಾೂಯವನ್ನೇ ಖಂಡಿಸಿ ಬಿಡುವನು. ಆದರೆ ಆತನು ತನ್ನ ಅಂತಿ ನಿಶ್ಚಯವಿಂಥವೆಂದು ಹೇಳಿಬಿಟ್ಟಿ ಮೇಲೆ ತನ್ನ ಸಂಪೂರ್ಣ ಅಭಿಪ್ರಾ ಯವನ್ನೂ ಬದಲಾಯಿಸಿಕೊಂಡು ಆತನ ಆಜ್ಞಿಗೆ ವಿಧೇಯವಾಗಿ ನಡೆಯ ವನು

ಶ್ರೀರಾಮನು ಕೈಕೇಯಿಸಾ ದಶರಥರಿಂದ ವನವಾಸಕ್ಕೆ ಅನುಚ್ಲಿಯ ನ್ನು ಪಡೆದು, ಸಂಗತಿಯನ್ನು ತನ್ನ ಮಾತೆಯಾದ ಕೌಸಲ್ಯೈಗೆ ತಿಳಿಸಲಿ ಕ್ವಾಗಿ ಆಕೆಯ ಅಂತಃಪುರಕ್ಕೆ ನಡೆದನು.-ಮತ್ತು, ಪಾದಗಳಿಗೆ ನಮಸ್ಕರಿಸಿ ರಾ ಜ್ಯಾಭಿಸೇಕಕ್ಕೆ ಪ್ರತಿಯಾಗಿ ತನಗೆ ವನವಾಸಕ್ಕೆ ಆಬ್ಞೈಯಾಯಿತೆಂಬ ವಾರ್ತೆ ಯನ್ನು ಆಕೆಗೆ ತಿಳಿಸಿದನು. ಕೌಸಲ್ಯಾದೇವಿಗೆ ಮಾತನ್ನು ಕೇಳಿ ಅಪಾರ ದುಃಖವ್ರಂಬಾಯಿತೆಂದು ಹೇಳಬೇಕೇನು! ಸಂದರ್ಭದಲ್ಲಿ ಲಕ್ಷ್ಮಣಸ್ವಾಮಿ ಯು ಅಕೆಯ ಪಾದಕ್ಕೆ ನಮಸ್ಪರಿಸಿ--ತಾಯೇ ಶೋಕಿಸದಿರು. ನಾನು ಸತ್ಯ' ವಾಗಿಯೂ ಶಪಧಮಾಡಿ ಹೇಳುತ್ತೇನೆ. ನಾನು ಶ್ರೀರಾಮನ ಅನುಯಾ ಯಿಯು, ಆತನು ಅಗ್ನಿಯಲ್ಲಿ ಪ್ರವೇಶಿಸಲಿ-ವನವನ್ನು ಪ್ರವೇಶಿಸಲಿ! ಆತನಿ ಗಿಂತ ನಾನು ಮೊದಲು ಪ್ರವೇಶಿಸುವೆನೆಂದು ತಿಳಿ ಸೂರ್ಯನು ತನ್ನ ಕಿರ ಇಗಳಿಂದ ಲೋಕದ ಅಂಧಕಾರವನ್ನು ಹೇಗೆ ಪರಿಹರಿಸುವನೋ ಹಾಗೆಯೇ ನಾನೂ ನನ್ನೆ ಪರಾಕ್ರಮದಿಂದ ಶ್ರೀರಾಮನಿಗೆ ಒದಗಿ ಬಂದಿರುವ ಸಂ ಕಭವನ್ನು ನೀಗಿಪುವೆನು. ನನ್ನ ಸಾಮಧ್ಯವನ್ನಾಡರೂ ನೋಡು' ಎಂದು ಸಮಾಧಾನಪಡಿಸಲು ಯತ್ನಿಸಿದನ. ತರುವಾಯ ಶ್ರೀರಾಷುನನ್ನು ಕುರಿತು- "ಹೇ ಆರ್ಯಾ ರಾಮಚಂದ್ದಾ, ರಘುವಂಶದಲ್ಲಿ ಇಂತಹೆ ಅನ್ಯಾಯವು ಬಿಂದೂ ನಡೆದುದಿಲ್ಲ. ಬ್ಯೇಷ್ಮ್ಠಕುವರನಾದ ನೀನು ನಿನ್ನಸ್ವಂತ ಹಕ್ಕಾದ ಸಿಂಹಾಸ ನವನ್ನು ಬಿಡುವ ಕಾರಣವೇನಿಡೆ? ಹೆಂಗಸಿನ ಮಾತನ್ನು ಲಕ್ಷ್ಮಮಾಡೆದೆ ನೀನು ಸಿಂಹಾಸನಾರೋ ಹಣಮಾಡು, ನಾನು ಧನುಬಾನಣಧಾರಿ ಯಾಗಿ ನಿನ್ನಬೆಂಗಾವಲಿಗಿರುವೆನ್ನು ಅಯೋಧ್ಯೆಯಲ್ಲಿ ಕೈಕೇಯಿಯೊಬ್ಬ ಳಲ್ಲದೆ, ನಿನ್ನ ರಾಜ್ಯಾಭಿಸೇಕಕ್ಕೆ ವಿರೋಧಾಭಿಪ್ರಾಯವುಳ್ಳವರು ಬೇರೆಯಾ ರೂ ಇಲ್ಲ. ಕೈಕೇಯಿಯೊಬ್ಬಳ ಅಭಿಪ್ರಾಯವೇ ಅಆಯೋಧ್ಯಾರಾಜಧಾನಿಯ' ಅಭಪ್ರಾಯವಾಗಲಾರದ್ದು ಹಾಗಾದಲ್ಲಿ ನನ್ನ ಬಾಣಪ್ರಯೋಗದಿಂದ

ಸೌಮಿತ್ರಿ ೧೯

ನಗರಿಯನ್ನೇ ಕ್ಷಣಮಾತ್ರದಲ್ಲಿ ನಿರ್ಮಾನಃಸ್ಯವನ್ನಾಗಿಸುವೆನು. ನೀನು ಜ್ಯೇಷ್ಮನಾಗಿರುವಲ್ಲಿ “ಭರತನಿಗೆ ರಾಜ್ಯವಾಳಲು ವಿನು ಬಾಧ್ಯತೆಯಿರ ವುದು? ಅವನೊಂದು ವೇಳೆ ತನ್ನಮಾವನ ಬೆಂಬಲದಿಂದ ಬಂದಲ್ಲಿ ಅವ ನನ್ನೂ ಕೈಕೇಯಿಯನ್ನೂ ಸೆರೆಗೊಳಿಸುವೆನು. ಹೆಂಗಸಿನ ಮಾತಿಗೆ ಮರು ಳಾದ ಮುದುಕನಾದ ಫೊರೆಯು ನನ್ನ ಮಾತಿಗೆ ವಿರೋಧಹೇಳಿದಲ್ಲಿ ಆತ ನನ್ನೂ ಕ್ರೈದುಮಾಡುವೆನು. - ಕತ್ತರಿಸಿ ಒಗೆಯುವೆನು. ಶ್ರೀರಾಮಾ ನನ್ನೊಂಡಿಗಿದ್ದು ರಾಜ್ಯಭಾರಮಾಡುವ ನಿನ್ನನ್ನು ವಿರೋಧಿಸುವ ಗೆಂಡಸಾವ ನಿರುವನು!' ಎಂದು ಮುಂತಾಗಿ ಗರ್ಜೆಸುತ್ತಿದ್ದನು. ಆಹಾ! ಇದು ಎಷ್ಟು ಮಟ್ಟಿನ ಭ್ರಾತೃಪ್ರೇಮವನ್ನು ಪ್ರಕಟಸುತ್ತಿರುವುದು!

ಆದರೆ ಶ್ರೀರಾಮಚಂದ್ರನು ಲಕ್ಷ ನಾಡಿದ ಮಾತುಗಳನ್ನು ಒಪ್ಪಲಿಲ್ಲ -"ತಮ್ಮಾ ಲಕ್ಷ ಕಾ, ನನಗೆ ನನ್ನಲ್ಲಿ ಅಪಾರ ಪ್ರೇಮವಿರುವು ದೆಂದು ನಾನು ಬಲ್ಲೆ, ಅಲ್ಲದೆ ನೀನು ಅಸಹಾಯ ಶೂರನೆಂಬುದನ್ನೂ, ನಿನ್ನ ಕತ್ತಿಗೆ ಎದುರಾಗಿ ಯಾವ ಶೂರನೂ ನಿಲ್ಲಲಾರನೆಂಬುದನ್ನೂ ನಾನು ಬಲ್ಲೆ. ಆದರೆ ಕೇಳು ಲೋಕದಲ್ಲಿ ಎಲ್ಲಕ್ಕೆಂತಲೂ ಧರ್ಮವು ಶ್ರೇಷ್ಠವಾ ದುದು, ಸತ್ಯವು ಧರ್ಮವನ್ನು ಆಶ್ರಯಿಸಿದೆ. ನಾವು ಸರ್ವಪ್ರಯತ್ನದಿಂದ ಲೂ ಸತ್ಯಧರ್ಮಗಳನ್ನು ರಕ್ಷಿಸಬೇಕಾದುದು ಕರ್ತವ್ಯವು, ನಾನು ಸತ್ಯಧರ್ಮಗಳ ರಕ್ಷಣೆಗಾಗಿ ಎಂಶಹ ಕಷ್ಟವನ್ನಾ ದರೂ ಸಹಿಸಲು ಸಿದ್ಧ ನಿದ್ದೇನೆ. ನನಗೆ ವನವಾಸಕ್ಕಾಗಿ ಬಂದಿರುವ ಅಜ್ಜಿಯು ಕೈಕೇಯಿ ಯಿಂದ ವ್ರೇರೇಪಿಸಲ್ಪಟ್ಟುದಾದರೂ ಅದು ನಮ್ಮ ತಂದೆಯಾದ ದಶರಥ ನಿಂದ ಬಂದುದಾದುದರಿಂದ ಸತ್ಯಪ್ರತಿಜ್ಞನಾದ ಆತನ ಆಜ್ಜೆಯನ್ನು ನಾನು ಪಾಲಿಸಲೇಬೇಕು ಕ್ಪಾತ್ರಧರ್ಮದ ಉಗ್ರವ್ನ ತ್ತಿ ಯನ್ನು ತ್ಯಜಿಸ್ನು ನಮ್ಮ ದೇಹೆಗಳು ಪೂಜ್ಯನಾದ ತಂದೆಯಿಂದಲೆ: ಪ್ರಾಪ್ತವಾದ ವಲ್ಬವೆ? ಜನ್ಮದಾಶನಾದ ಆತನನ್ನು ಬಂಧಿಸುವ ಅಭವ ಕತ್ತರಿಸಿಹಾಕುವ ಯೋಚನೆ ಸಾದರೂ ನಮ್ಮ ಮನಸ್ಸಿನಲ್ಲಿ ಬರುವುದು ಯುಕ್ಕವೇ ಎಂದ್ರು ಯೋಚಿಸು. ಆತನ ಸತ್ಯಪ್ರತಿಜ್ತೆಯನ್ನು ಪಾಲಿಸದಿದ್ದಲ್ಲ ಮಕ್ಕಳಾಡ ನಾವು ಬದುಕಿದ್ದು ತಾನೇ ಸಾರ್ಥಕವೇನು? ಇದೂ ಅಲ್ಲದೆ ಒ6ದು ಸಂಗತಿ ಯನ್ನು ಮುಖ್ಯವಾಗಿ ಗಮನಿಸು. ನನ್ನ ವನವಾಸ ಗಮನದ ಕಾರ್ಯಕ್ಕೆ;

೨೦ ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

ದೈವವೇ ಪ್ರಧಾನ ಕಾರಣವೆಂದು ತಿಳಿಯುವನಾಗು. ಕೈಕೇಯಿಯು ಫಿಮಿತ್ತ ಮಾತ್ರಳು. ಅವಳ ಬುದ್ಧಿಯು ದೈ ವಮಾಯೆಯಿಂದಲೇ ಪರಿವರ್ತಿತವಾ ಗಿದೆ. ಹಾಗಿಲ್ಲದಿದ್ದ ಛಿ ಈವರೆಗೆ ನ್ನ ನ್ನ್ನು ಅತಿಶಯ ಪೆ ಶ್ರೇಮದಿಂದ ನೋಡಿ ಕೊಂಡಿದ್ದ ಆಕೆಯು ಈಗ ನನ್ನ ರಾಜ್ಯಾ ಭಿಷೇಕ ಕಾಲದಲ್ಲಿ ಅದನ್ನು ತಪ್ಪಿಸಿ ವನವಾಸವನ್ನು ಕಲ್ಪಿಸಿ ನಮ ನ್ನು ಹೀಗೆ ನಿರ್ಬಂಧಿಸಲು ವುದು! ನನ್ನನ್ನು ಭಕಯ mie ದ್ವೇಷಿಸಿದವಳಲ್ಲ- ದೂಸಿಸಿದವಳೆಲ್ಲ. ಎಂದೂ ಒಂದು ಕಟುವಚನದಿಂದಲಾದರೂ ನನ ನ್ನು ಕರೆದುದನ್ನು ನಾನು ಅರಿಯೆ. ಆದ್ದರಿಂದ ಈಗ ಆಕೆಯು ದೈವಪ್ರೇರಿತಳಾಗಿಯೇ ಕಾರ್ಯ ಮಾಡಿದ್ದಾಳೆಂದು ತಿಳಿದು, ಆಕೆಯಲ್ಲೂ ದ್ವೇಷವನ್ನಿಡಬೇಡ, ನಿನಗುಂಬಾ ಗಿರುವ ದುಃಖವನ್ನು ದೂರಮಾಡು. ಧೈರ್ಯವನ್ನು ಆವಲಂಬಿಸು' ಎಂದು ನುಡಿದನು, ಶ್ರೀರಾಮನ ಮಾತುಗಳು ಲಕ್ಷ ಬೌನಿಗೆ ಸಂಪೂರ್ಣ ಸಮಾಧಾನ

ವನ್ನುಂಟುಮಾಡಲಿಲ್ಲ. ಸ್ವಲ್ಪ ಹೊತ್ತು ತಲೆಯನ್ನು ತಗ್ಗಿಸಿ ಸುಮ್ಮನಿದ್ದು ತರುವಾಯ -" ಅಣ್ಣಿ ಯ್ಯಾ, ಎಲ್ಲಕ್ಕೂ ದೈವ ದೈವ ಎಂದು ಪೌರುಷಶೀನ ರಾಡುವ ಮಾತುಗಳಿವು. ಲೋಕದಲ್ಲಿ ಶೂರರಾದವರು ತಮ್ಮ ಪರಾಕ್ರಮಾ ತಿಶಯದಿಂದ ಹಲವು ಮಹತ್ಕಾ ರ್ಯಗಳನ್ನು ಸಾಧಿಸುತ್ತಿ ರುವುದನ್ನು ನಾವು ನೋಡುತ್ತಿದ್ದೆ (ವಲ್ಲವೆ? ನುಷ್ಯ ನು ಎಲ್ಲಕ್ಕೂ ದ್ರೆ ವವೇ ದಿಕ್ಕೆಂದು ಕಳಿ ತಿರುವುದಕ್ಕಿಂತಲೂ ತನ್ನ SN, ಶೈವವನ್ನು ಒಂದಕ್ಕೆ ಒತ್ತಿ ಪ್ರಯತ್ನಮಾಡಿದಲ್ಲಿ ಒಂದುವೇಳೆ ಜಯಪ್ರಾಪ್ನವಾಗದಿದ್ದರೂ, ಟ್ರ ನಿಗೆ ದಃಖವುಂಟಾಗಲಾರದು. ಆದುದರಿಂದ ಎಲ್ಲೆ ರಘುನಾಯಕಾ, ನನಗೆ ನೀನಿಂದು ಆಜ್ಞೆಯ ನ್ನು ಮಾತ್ರ ಕೊಡು; ಕ್ಲಿಪನ ವಿಜಯ ಹೊಂದು ಈತ ಅಥವಾ ಪೌರುಷವು ಪ್ರತಾಪಶಾಲಿಯಾಗುವುದೋ ಆಕ ನೋಡಿಬಿಡುತ್ತೇನೆ. ಅಣ್ಣಯ್ಯಾ, ರಘುಕುಲದರಸರು ಏರದ ಸಿಂಹಾಸ pl ಯೋಗ್ಯನಾದ ನೀ ನು ಕಾಲ್ಪಡೆಯಿಂದ ಅಡೆನಿಅಡವಿ ರಷ್ಟ

ತ್ತಿರುವುದನ್ನು ನಾನು ತರು. ನೀನು ಇಂದು ಅನುಮತಿಯ ನ್ಸ್ಪಿತ್ತರೆ ಸಾಕು. ನಿನ್ನ ಪ್ರಾಣಕ್ಕಾಗಲೀ ಯಶಸ್ಸಿಗಾಗಲೀ ಕುಂದಕ ಉಂ ಟಾಗದಂತೆ ನಿನ್ನ ಶತ್ರುಗಳನ್ನೆಲ್ಲ ಧ್ವಂಸಗೊಳಿಸಿ ನೀನು ಸಿಂಹಾಸನವನ್ನೇ

4) ಸೌಮಿತ್ರಿ ೨೧

ರಲು ನಡೆವ ಮಾರ್ಗವನ್ನು ಸುಗಮಗೊಳಿಸುವೆನು, ನನ್ನ ಪ್ರಾರ್ಥನೆ ಯನ್ನು ಮಾನಸಿಕ ಮಾಡಬೇಡ' ಎಂದು ಕಣ್ಣೀರಿಡುತ್ತ ಪ್ರಾರ್ಥಿಸಿ ದನು.

ತನ್ನ ತಮ್ಮನು ಆಗಾಧ ಭ್ರೂ ತೃಪ್ರೇಮಪಾಶಬದ್ಮನಾಗಿ, ತನ್ನ ಮೇಲೆ ಯನ್ನು ಹೇಳುತ್ತಿರುವ ಮಾತುಗಳನ್ನು ಕೇಳಿ ಸತ ಕಣ್ಣು ಗಳಲ್ಲ ಆನಂದಬಾಷ್ಟಗಳುದುರುತ್ತಿರಲು, ಒತತ ಕೈಗ ಳೆರಡನ್ನೂ ತನ್ನ ಕೈಗಳಲ್ಲಿ ಬಡಿದುಕೊಂಡು ಎ4 ತಮ್ಮ್ಮಾ ಲಕ್ಷ ಕೌ, ನೀನು ಹೇಳುವು ನಿಲವೂ ನಿಶ್ಚಯ. ಆದರೆ ಈಗಿನ ಸಂದಭ ವನ್ನು ಕುರಿತು ಯೋಚಿಸು, "ಮಕ್ಕಳಾದ ನಾವು ತಂದೆತಾಯಿಗಳ ಪಾಲಿಸತ ಕುದು ಧರ್ಮವಾಗಿದೆ. ಆದಕ್ಕೆಂತಲೂ ಹೆಚ್ಚಿನ ಧರ್ಮವೂ-ಕರ್ತವ್ಯವೂ ಮತ್ತೊಂದಿಲ್ಲ. ಅದಕ್ಕೆ ನೀನು ಪ್ರತಿ ಹೇಳಬೇಡೆ. ನಾವೀಗ ಕಸ್ಟ ಸಹನ ಮಾಡೆಲು ಒಪ್ಪ ದಿದ್ದ ನಮ್ಮ ತಂದೆಯು ತನ್ನ ಪ್ರತಿಜ್ಞೆ ಯನ್ನು ಉಳಿಸಿ ಕೊಳ್ಳಲಾ ರನು. ದಶದಿಕು ಗಳಲ್ಲೂ ರಧವನ್ನು ನಡೆಸಿ, ಜಮಾ 00 ನ್ನಿಸಿಕೊಂಡ ನಮ್ಮ ಪೂಜ್ಯ ವಿತೃವು ತನ್ನ ಪ್ರತಿಜ್ಞಾ ಭಂಗಮಾಡಿಕೊ ಳೈಲು ನಾವೇ ಕಾರಣರಾದಲ್ಲಿ ಅಂತಹ ನಾವು ಮಕ್ಕ ಗಿದ್ದು ತಾರೇ ಪ್ರಯೋಜನವೇನು? ಆದುದರಿಂದ - ತಮ್ಮಾ ಲಕ್ಷ್ಮ ಚೆ ನಮ್ಮ ತಂದೆ ನ್ನು ಸತ್ಯ ಪ್ರತಿಜ್ಞ ನನ್ನಾ ಗಿಸಲು ಎಂತಹ ಕಷ್ಟ ವನ್ನಾ ದರೂ ಆಫ ಸಲು ಸಿದ್ದನಾಗಿರುವೆನು. ನನ್ನ ಫಂ ವನ್ನು ಲರ ಳಸಬೇಡ' ಎಂದು ನುಡಿವನು.

ಶೀರಾಮನಾಡಿದ ಮಾತುಗಳಿಗೆ ವಿನು ಪ್ರತಿಹೇಳಬೇಕೆಂದು ತೋರೆ ಲಿಲ್ಲ. ಲಕ್ಷ ಮನಸ್ಸಿನ ಕ್ರೋಧಾಗ್ತಿಯು ಇನ್ನೂ ಶಾಂತಗೊಂಡಿರ ಲಿಲ್ಲ. ಆತನ ಮ:ಖಭಾವದಿಂದ ಮನಸ್ಥಿತಿಯನ್ನು ಗ್ರಹಿಸಿದ ರಾಮಚಂ ದ್ರನು -" ಮಗೂ ಲಕ್ಷ್ಮಣಾ, ನಾವು ಕಣ್ಣಿನಿಂದ ನೋಡುತ್ತಿರುವ ರಾಜ್ಯ ಐಶ್ವರ್ಯ ಭೋಗ ರುವ "ಶಾಶ ೈತವಾಗಿದ್ದಲ್ಲಿ ಒಂದುವೇಳೆ ಹೇಳಿದಂತೆ ಸತ್ಯಕ್ಕೆ ಹಾನಿ ತಂದುಕೊಂಡಾದೆರೂ ಇವುಗಳನ್ನು ಪಡೆ ಯೋಣವೆನ್ನ ಬಹುದು. ಆದರೆ ನೋಡು, ಇವೆಲ್ಲವೊ ಮಿಂಚಿನಂತೆ ಅತಿ ಚಂಚಲವಾದುವು. ಇವುಗಳೇ ಶಾಶ್ವತನೆಂದು ತಿಳಿದು, ಅವುಗಳನ್ನು ಗಳಿ

೨೨ ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

ಸಲೆಕ್ಟಿ ಸುವುದು ಮನುಷ್ಯನಲ್ಲಿರುವ ರಾಜಸಿಕವಾದ ಕ್ರೋಧದೆ ಕಾರ್ಯವು, ಕ್ರೋಧವೇ ಲೋಕದಲ್ಲಿ ಸಕಲ ವಿಧವಾದ ಮಾನಸಿಕ ಸಂಶಾಪಕ್ಕೂ ಸಂಸಾರದಲ್ಲಿನ ಸಕಲನಿಧ ಬಂಧನಗಳಿಗೂ ಮೂಲಕಾರಣವಾಗಿರುವುದು, ಕ್ರೋಧವೇ ಧರ್ಮವನ್ನು ನಾಶಗೊಳಿಸತಕ್ಕುದು. ಆದುದರಿಂದ ಕ್ರೋ ಧವನ್ನು ಶ್ಯಾಗಮಾಡಿ ಶಾಂತಿಯನ್ನು ಧಾರಣಮಾಡು. ಆಗ ನಿನಗೆ ಲೋಕ ದಲ್ಲಿ ಶತ್ರುಗಳೆಂಬುವರೇ ಇರಲಾರರು' ಎಂದು ನುಡಿದು ಅವನನ್ನು ಸಮಾ ಧಾನಗೊಳಿಸಿದನು.

ತನಗೆ ಪರಮಪ್ರೇಮಾಸ್ಪ್ರದನಾದ ಶೀರಾಮನು ತಂದೆಯ ಮಾತನ್ನು ಪಾಲಿಸಲು ವನವಾಸಕ್ತಾಗಿ ಹೊರಡುವುದೇ ನಿಶ್ಚಯವೆಂದು ಹೇಳಿದಮೇಲೈ, ಲಕ್ಷ್ಮಣನು ತನ್ನ ಆವರೆಗಿನ ಅಭಿಪ್ರಾಯವನ್ನು ಸಂಪೂರ್ಣವಾಗಿ ಬದ ಲಾಯಿಸಿಕೊಂಡನು. ರಾಮನ ಮುಂಡೆ ನಿಂತು, ಎರಡು ಕೈಗಳನ್ನೂ ಜೋಡಿಸಿಕೊಂಡು, -" ಅಣ್ಣಯ್ಯಾ ಶೀರಾಮಚಂದ್ರಾ, ನಾನು ನಿನ್ನ ಸಹ ಚರನೆಂದೂ, ನಿನ್ನನ್ನು ಯಾವಾಗಲೂ ನೆಳಲಿನಂತೆ ಅನುಸರಿಸತಕ್ಕವ ನೆಂದೂ ನೀನು ಹೇಳುತ್ತಿರಲಿಲ್ಲನೆ? ಇಂದು ನನ್ನನ್ನು ಬಿಟ್ಟು ವನಕ್ಕೆ ಹೋಗಲು ಇಚ್ಛೆಸಿದೆಯಾ !' ಎಂದು ಅಂಗಲಾಚಿಕೊಂಡನು ಲಕ್ಷ ಬೌ ನಾಡಿದ ಮಾತುಗಳನ್ನು ಕೇಳಿದ ರಾಘವನು ಅವನನ್ನು ಬಾಚಿ ತಬ್ಬಿ ಕೊಂಡು, ಆನಂದಬಾಷ್ಸಗಳುದುರುತ್ತಿರಲು-"ತಮ್ಮಾ ಲಕ್ಷ ನ, ನಿನ್ನನ್ನು ಬಿಟ್ಟು ನನಗೆ ಲೋಕದ ಯಾನ ಸುಖಭೋಗವಾಗಲ್ಲಿ ಐಶ್ವರ್ಯವಾಗಲಿ, ಸ್ಪರ್ಗವಾಗಲಿ, ಮೋಕ್ಷವಾಗಲಿ ಪ್ರಿಯವಾಗಲಾರದು. ಆದರೆ ಯೋಚಿಸು, ನಾವಿಬ್ಬರೂ ಈಗ ಕಾಡಿಗೆ ಹೊರಟು ಹೋದಲ್ಲಿ ಇಲ್ಲಿ ದುಃಖಿತನಾಗಿಯೂ ಅಸಹಾಯನಾಗಿಯೂ ವ್ಯಥೆಪಡುತ್ತಿರುವ ತಂದೆಯನ್ನು ಸಂತ್ಸೆಸುವರಾರು ? ಆತನ ಯೋಗಕ್ಷೇಮವನ್ನು ನೋಡಿಕೊಳ್ಳುವರಾರು? ಎಂದನು.

ಆದರೆ ಲಕ್ಷ್ಮಣನನ್ನು ಕಾರಣದಿಂದ ಅಯೋಧ್ಯೆಯಲ್ಲಿ ನಿಲ್ಲಗೊ ಡಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಶ್ರೀರಾಮನು ಆತನನ್ನೂ ತಮ್ಮೊಂದಿಗೆ ವನಕ್ಕೆ ಕರೆದೊಯ್ಯಲು ಒಪ್ಪಿದನು. ತರುವಾಯ ಲಕ್ಷ ಟೌನು ಹೃಷ್ಟಮಾನ ಸನಾಗಿ, ತನ್ನೆ ತಾಯಿಯಾದ ಸುನಿತ್ರೆಯ ಬಳಿಗೆ ಹೋಗಿ ವಂದಿಸಿ ಆವರೆಗೆ ನಡೆದ ವೃತ್ತಾಂತೆವನ್ನೆ ಲ್ಲ ಸೂಕ್ಷ ಮಾಗಿ ತಿಳಿಸಿ, ತಾಯೇ, ನಾನು ಶ್ರೀ

ಸೌಮಿತ್ರಿ ೨ಿಷ್ಲಿ

ಸೀತಾರಾಮರೊಂದಿಗೆ ಕಾಡಿಗೆ ಹೋಗುವುದನ್ನು ನಿಶ್ವಯಷಾಡಿದ್ದೇನೆ. ನೀನು ದಯಮಾಡಿ ಅಪ್ಪಣೆ ಕೊಡೆಬೇಕು' ಎಂದು ಪ್ರಾರ್ಥಿಸಿದನು ಮಾತನ್ನು ಕೇಳಿದ 'ಹಾರ್ಫೀಕುತೆಯ: ಪ್ರತಿಮಾತನ್ನಾಡದೆ, ಒಪ್ಪಿ ಅಪ್ಪಣೆ ಕೊಟ್ಟಿಳು. ಮಾತ್ರಪಲ್ಲ.

*`ಮಗನೇ ಲಕ್ಷ ಟ್ರೌಾಸಂದೇಹಗೊಳ್ಳ ಬೇಡ, ನಿಮ್ಮಣ್ಣ ನಾದ ರಾಮ ನನ್ನು ಸಾಕ್ಲಾತ್ಮಂದೆಯಾದ ದಶರಥನನ್ನಾಗಿ ತಿಳಿ. ಸೀತಾಡೀವಿಯನ್ನೇ ನಾನೆಂದು ತಿಳಿ ಅಡನಿಯನ್ನು ಅಯೋ ಧ್ಯಯನ್ನಾ ಗಿ ತಿಳಿ ಮಗನೇ ಸಂತೋಷದಿಂದ ಹೋಗಿಬಾ! ಚು ಆಶ್ವಾಸನ ಕೊಟ್ಟಿಳು.

ಇನ್ನು ಮಿಕ್ಕ ವಳೆಂದರೆ ಲಕ್ಷ್ಮ ಣನ ಪತ್ನಿ ಯಾದ ಊರ್ಮಿಳಾದೇವಿ.

ಲಕ್ಷ್ಮ, ಣನು ಜು ತಡೆ ಹೊರಟನೇ ಎಂಬ ಸಂಗತಿ ಯನ್ನು ರಾಮಾಯಣದಲ್ಲಿ ಕವಿಯು ಹೇಳಿಲ್ಲ ಆದರೂ, ಲಕ್ಷ್ಮ ಣನ ಕಾರ್ಯ ಕ್ರೈ ಆಕೆಯ ಸಮ್ಮತಿಯೂ ಇತ್ತೆಂದು ನಾವು ಜಟಾ ಲೋಕದ ವ್ರ ತಿವ್ರತಾಜನಕ್ಕೆ ಗುರುಸ್ಥಾನೀಯಳು ಸೀತಾದೇವಿ ಎಂಬ ವಿಷಯದಲ್ಲಿ ಸಂಡೇ ಹವಿಲ್ಲವಷ್ಟೆ | ಆಕೆಯ ತಂಗಿಯಾದ ಊರ್ಮಿಳಾದೇವಿಯೂ ಪಾತಿವ್ರ ತ್ಯ ಧರ್ಮರಕ್ಷಣೆಯಲ್ಲಿ ಆಕೆಗೇನೂ ಕಡಿಮೆಯಾದವಳಲ್ಲ. ಶ್ರೀರಾಮನು ತನ್ನ ವನವಾಸ ಪ್ರಯಾಣ ವಿಚಾರವನ್ನು ಸೀತಾದೇವಿಗೆ ತಿಳಿಸಲು ಆಕೆಯ ಆಂ ತಃಪುರಕ್ಕೆ ಹೋದಾಗ, ಆಕೆಯು ತನ್ನನ್ನು ಒಂದಿಗೇ ವನಕ್ಕೆ ಕರೆದೊಯ್ಯ ಬೇಕೆಂದೂ ಇಲ್ಲದಿದ್ದಲ್ಲಿ ತಾನು ಪ್ರಾಣತ್ಕಾಗ ಮಾಡುವೆನೆಂದೂ ಶ್ರೀರಾಮ ನನ್ನು ನಿರ್ಬಂಧಗೊಳಿಸಿದಳು, ಆದರೆ ಊರ್ಮಿಳಾದೇವಿಯು ತನ್ನ ಭರ್ತ ನಾದ ಲಕ್ಷ್ಮಣಸ್ವಾಮಿಯನ್ನು ಹಾಗೆ ನಿರ್ಬಂಧಗೊಳಿಸಿದಂತೆ ಕಂಡು ಬಂದಿ ೪. ಹದಿನಾಲ್ಕು ವರ್ಷಕಾಲ ಅಗಲಿ ಹೋಗಲು ಸಿದ್ಧನಾದ ಲಕ್ಷ್ಮಣನು, ತನ್ನ ಪತ್ನಿಗೆ ಹೇಳದೆಯೇ, ಆಕೆಯ ಅನುಮತಿಯನ್ನು ಪಡೆಯದೆಯೇ ಹೊ ರಟನೆಂದು ಊಹಿಸಲು ಸಾಧ್ಯವಿಲ್ಲ. ರಾಮಾಯಣದಲ್ಲಾದರೋ ಲಕ್ಷ್ಮ ಣನು ಊರ್ಮಿಳಾದೇವಿಯನ್ನು ಕಂಡು ತನ್ನ ವನಪ್ರಯಾಣ ವಿಚಾರವನ್ನು

*ರಾಮಂ ದಶರಥೆಂ ವಿದ್ಧಿ ಮಾಂ ವಿದ್ಧಿ ಜನಕಾತ್ಮ ಜಾಮ್‌ ಆಯೋಧ್ಕಾಂ ಆಟವೀಂ ವಿದ್ಧಿ ಗಚ್ಛ ತಾತ ಯೆಥಾಸುಖಂ

೨೪ ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

ಆಕೆಗೆ ತಿಳಿಸಿ ಅನುಮತಿಯನ್ನು ಪಡೆದಂತೆ ಹೇಳಿಲ್ಲವಾದರೂ ಲಕ್ಷ್ಮಣನು ಆಕೆಗೂ ತಿಳಿಸದೆ ಹೊರಟರಲಾರನು. ಆಗ ಆಕೆಯು ಸೀತಾದೇವಿಯಂತೆ ತನ್ನನ್ನೂ ವನಕ್ಕೆ ಕರೆದೊಯ್ಯಬೇಕೆಂದೂ, ಹಾಗಿಲ್ಲದಿದ್ದಲ್ಲಿ ತಾನು ಪ್ರಾಣ ತ್ಯಾಗ ಮಾಡುವೆನೆಂದೂ ಹೇಳಿದ್ದಲ್ಲಿ, ನಿರ್ಬಂಧವನ್ನು ನಿವಾರಣೆಗೊಳಿಸಿ ಕೊಳ್ಳದೆ ಲಕ್ಷ್ಮಣನು ನಿಶ್ಚಿಂತೆಯಿಂದ ಹೊರಡಲು ಸಾಧ್ಯವಿರುತ್ತಿರಲಿಲ್ಲ. ಆದುದರಿಂದ ಸುಮಿತ್ರಾದೇವಿಯಂತೆ ಊರ್ಮಿಳೆಯಾದರೂೂ ಲಕ್ಷ ಸ್ಟ್ರಾ ಮಿಯ ಇಷ್ಟವನ್ನು ಅನುಸರಿಸಿ ಆತನ ವನವಾಸಕ್ಕೆ ದೃಢಮನಸ್ಸಿನಿಂದ ಸಮ್ಮತಿಕೊಟ್ಟಿ ರಬಹುದೆನ್ಸ್ನಲು ನಿನೂ ಸಂಶಯವಿಲ್ಲ,

ಇಲ್ಲಿ ಇದಕ್ಕಿಂತಲೂ ಹೆಚ್ಚಾಗಿ ಗಮನಿಸತಕ್ಕ ಮತ್ತೊ ಂದಂಶವುಂಟು, ಶ್ರೀರಾಮನ ಅವತಾರವೇ ರಾವಣ ವಧಾಕಾರ್ಯಕ್ಕಾಗಿ ಎಂಬುದು ನಿಶ್ಚಯ ವಾಗಿರುವಲ್ಲಿ ಆತನಿಂದ ನಡೆಯಿಸಲ್ಪಡುವ ಕಾರ್ಯಗಳೆಲ್ಲವೂ ಕಾರ್ಯ ಸಾಧನೆಗೆ ಸಹಾಯಕವಾಗಿಯೇ ನಡೆಯಬೇಕಲ್ಲವೆ? ರಾವಣವಥೆಗೆ ಸೀತಾ ಪಹರಣವಾಗಬೇಕಾದುದೂ ಅದಕ್ಕಾಗಿ ಸೀತಾದೇವಿಯು ಶ್ರೀರಾಮನೊಂ ದಿಗೆ ವನಕ್ಕೆ ಹೊರಡೆಬೇಕಾದುದೂ ಅವಶ್ಯಕವಾಗಿದ್ದಿತು. ಆದರೆ ಸೀತೆ ಯಂತೆಯೇ, ಊರ್ಮಿಳೆಯೂ ವನಕ್ಕೆ ಹೊರಟದ್ದಲ್ಲಿ ಇಬ್ಬರು ಸ್ತ್ರೀಯರ ರಕ್ಷಣೆಯೂ ಶ್ರೀರಾಮಾದಿಗಳಿಗೆ ಬಹು ಪ್ರಯಾಸಕರವಾಗಿರುತ್ತಿದ್ದಿತು, ಮಾತ್ರವಲ್ಲ - ಲಕ್ಷ ಬೌನು ಶ್ರೀಸಿೀತಾರಾಮರ ದಾಸಭೂತನಾಗಿ ಕೇವಲ ಅವರ ಸೇವೆಗೆಂದೇ ಹೊರಟುದರಿಂದ, ಸ್ವಾಮಿಯ ರಾಣಿಯೊಂದಿಗೆ ದಾಸ ಪತ್ನಿಯೂ ಹೊರಡುವುದು ಸಮಂಜಸನೆನ್ನಿಸಲಾರದು ಊರ್ಮಿಳೆಯೂ ವನದಲ್ಲಿ ಅವರಿಗೆ ಭಾರವಾಗಿದ್ದಲ್ಲಿ, ರಾವಣ ವಧಾಕಾರ್ಯವು ನಿರ್ನಿಘ್ನ ವಾಗಿ ನಡೆಯುತ್ತಿದ್ದಿತೋ ಇಲ್ಲವೋ ಊಹಿಸಲು ಶಕ್ಯವಿಲ್ಲ, ಅದೆಂತಾದರೂ ಇರಲಿ, ಊರ್ಮಿಳಾದೇವಿಯು ತನ್ನಸ್ವಾಮಿಯನ್ನು ಹದಿನಾಲ್ಕು ವರ್ಷಕಾಲ ಅಗಲಿ ವ್ರತಾಚರಣಶೀಲಳಾಗಿರಲು ನಿರ್ಧರಿಸಿ, ರಾಜಧಾನಿಯಲ್ಲೇ ನಿಂತುದು ಆಕೆಯ ಅಗಾಧವಾದ - ಅನುಪಮವಾದ - ಅದ್ವಿತೀಯ ಪಾತಿವ್ರತ್ಯ ಪ್ರದ ರ್ಶಕವಾದ ಮಹತ್ಯಾರ್ಯವೆನ್ನಲು ವಿನೂ ಸಂಶಯವಿಲ್ಲ. ಆಕೆಯ ತ್ಯಾಗವು ಅನುಪಮವಾದುದೆನ್ನಲು ಏನೂ ಅಡ್ಡಿಯಿಲ್ಲ. ಹೀಗೆ ಸೀತೆ,ಲಕ್ಷ್ಮಣ, ಕೈಕೇಯಿ ಸುಮಿತ್ರಾದೇವ್ಕಿ ಊರ್ಮಿಳಾ ಮುಂತಾದವರೆಲ್ಲರೂ, ಶ್ರೀ

ಸೌಮಿತ್ರಿ ತಾ

ರಾಮನ ಅವತಾರಕಾರ್ಯಕ್ಕೆ ಸಹಾಯಕರಾಗಿ, ದೈವಪ್ರೆ *ರಿತರೋ ಎಂ ಬಂತೆ, ತಮ್ಮ ತಮ್ಮ ಪಾತ್ರಗಳಿಂದ ಆಗಬೇಕಾದ ಕಾರ್ಯವನ್ನು ಜಗ ನ್ನ್ನಾ ಟಕದಲ್ಲಿ ಉತ್ತಮರೀಶಿಯಿ:ಂದ ಅಭಿನಯಿಸಿದ್ದಾ ರಾದರೂ, ಮಾನವೆ

ಜನ್ಮದಾರಣಮಾಡಿದ ಅವರ ತ್ಯಾ ಗತೀಲ ಮನೋವೃತಿ ಕ್ತಿಯು ಅಭಿನಂದ ಫೀಯವಿದೆ.

ಹೀಗೆ ಶ್ರೀರಾಮಚಂದ್ರನು ಸೀತಾಲಕ್ಷ್ಮ್ಮಣರೊಂದಿಗೆ ಮುನಿವೇಷ

ಧಾರಿಯಾಗಿ ವನವಾಸಕ್ಕಾಗಿ ಪ್ರಯಾಣಮಾಡಿದನು.

ಛ್‌... ಅಧ್ಯಾಯ *ರಣರೆಂಗದೆಲ್ಲಿ 3

ದಶರಥರಾಜನ ಅಬ್ಞೆಯನ್ನ ಫುಸರಿಸಿ, ಮಂತ್ರಿಯಾದ ಸುಮಂತ್ರನು ರಥವನ್ನು ಸಿದ್ದಗೊಳಿಸಿಕೊಂಡು ಅದರಮೇಲೆ ಶ್ರೀಸೀತಾರಾಮ ಲಕ್ಷ್ಮಣ ರನ್ನು ಕೂರಿಸಿಕೊಂಡು ಕರೆಡೊಯ್ದ ನು. ಮಾರ್ಗಮಧ್ಯದಲ್ಲಿ ದೋಣಿಯಲ್ಲಿ ಸಂಗಾನೆದಿಯನ್ನು ದಾಟ, ತರುಷಾಯ ಜರೆದ್ಯಾಜ ಮಹರ್ಷಿಗಳನ್ನು ಕಂಡ್ಕು ಅವರಿಂದ ಅರಣ್ಯದಲ್ಲಿ ತಾವು ಮಾಸಮಾಡಲು ಯೋಗ್ಯವಾಡ ಸ್ಥಳೆವಾವು ದೆಂದು ಕೇಳಿ 10 ಮುಂದರಿದರು. ಹೀಗೆ ವನವಾಸದಲ್ಲಿದ್ದಾಗ ಒಂದು ದಿನ ಮಾರ್ಗಾಯಾಸದಿಂದ ಬಳಲಿ ಸೀತಾರಾಮರು ಒಂದು ಮರ ದಡಿಗೆ ಹೋಗಲು, ಒಡನೆ ಭಂಟನಾಗಿ ಜೊತೆಯಲ್ಲೇ ಇದ್ದೆ ಲಕ್ಷ ಟೌನು ಅಲ್ಲಿಯ ಕಲ್ಲುಮುಳ್ಳುಗಳನ್ಷೆ ತೆಗೆದು ನೆಲವನ್ನು ಶುದ್ಧಿ ಪಡಿಸಿ, ಎಳೆಯ ಚಿಗುರುಗಳನ್ನು ತಂದು ಆಸನವನ್ನು ಸಿದ್ದಗೊಳಿಸಿಕೊಟ್ಟಿ ನು. ಹಾಗೆ ಸಿದ್ಧ ವಾದ ಆಸನದಮೇಲೆ ಸುಖವಾಗಿ ಕುಳಿತ ಶ್ರೀರಾಮನು ಲಕ್ಷೆ ನನನ್ನು ಮೋಡಿ - “ತಮ್ಮಾ ಲಕ್ಷ ಟಾ ಸುಕುಮಾರನಾದ ನೀನು ರಾತ್ರೆ ಹೆಗಲುಗಳೆನ್ಸ್ನದೆ, ಬಿಸಿಲು ಮಳೆಗಾಳಿಯೆನ್ನದೆ ಎಷ್ಟು ಕ್ರಮಪಡುತ್ತಿರುತೆ ಯಲ್ಲಾ! ನೀನು ಹಿಂದಿರುಗಿ ರಾಜಧಾನಿಗೆ ಹೋಗಿ ನಿನ್ನ ಹೆಂಡತಿಯೊಂದಿಗೂ ಶಾಯಿಯೊಂದಿಗೂ ಸುಖವಾಗಿರಲಾಗದೇ! ನಾವು ನಮ್ಮ ಕರ್ಮಫಲತಾಗಿ

೨೬ ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

ದೊರೆತ ಕಷ್ಟವನ್ನು ಭೋಗಿಸಿ ಹೆದಿನಾಲ್ತುವರ್ಷಗಳು ಕಳೆದ ತರುವಾಯ ಬಂದು ಸೇರುತ್ತೇವೆ? ಎಂದನ್ನು

ಮಾತನ್ನು ಕೇಳಿದ ಲಕ್ಷ ಭೌನು-

*"ಅಣ್ಣಯ್ಯಾ ಏನು ಮಾತನ್ನು ಹೇಳುತ್ತಿರುವೆ! ನಾನಾಗಲೀ ಸೀತೆಯಾಗಲೀ ನಿನ್ನನ್ನು ಬಿಟ್ಟು ನಿಮಿಷಮಾತ್ರವಾದರೂ ಜೀನಿಸಬಲ್ಲೆವೆಂದು ತಿಳಿದಿದ್ದಿೀ ಯಾ! ನೀರಿನಿಂದ ಹೊರಕ್ಕೆ ತೆಗೆದ ಮಾನು ಹೇಗೆ ಬದುಕಲಾರದೋ ಹಾಗೆ ಯೇ ನಾವೂ ಸಹ ನಿನ್ನನ್ನುಳಿದು ಬದುಕಲಾರೆವೆಂದು ತಿಳಿ, ನನ್ನ ಹೊರತು ನನಗೆ ತಾಯ್ಕಿ ತಂದೆ, ಸೋದರನಾದ ಶತ್ರುಘ್ಪ, ಹೆಚ್ಚೇನು ಸ್ವರ್ಗವೂ ಬೇ ಕೆನ್ನಿಸುವುದಿಲ್ಲವೆಂದು ಖಂಡಿತವಾಗಿ ತಿಳಿದಿರುವನಾಗು. ಇನ್ನು ಮೇಲೆ ನಮ್ಮ ನ್ನು ಬಿಟ್ಟು ಅಯೋಧ್ಯೆಗೆ ಹೋಗಿ ಸುಖವಾಗಿರೆಂದು ಮಾತ್ರ ನನಗೆ ಹೇಳ ಬೀಡೆ, ನಾನು ಮಾತುಗಳನ್ನು ಕೇಳಿ ಸಹಿಸಲಾರೆನು'ಎಂದು ನುಡಿದು ನಮ ಸ್ವರಿಸಿದನು. ತನ್ನ ತಮ್ಮನ ಅನುಪಷು ಭ್ರಾತೃಪ್ರೇಮವನ್ನು ಕಂಡು ಶ್ರೀ ರಾಮನಿಗೆ ಪರಮಾಶ್ಚರ್ಯವಾಯಿತು,

ಮತ್ತೊಮ್ಮೆ ಕಾಡಿನಲ್ಲಿ ರಾತ್ರೆಯಾಗಲು ಲಕ್ಷ್ಮಣನು ಹುಲ್ಲು ಮತ್ತು ಚಿಗುರೆಲೆಗಳಿಂದ ಹಾಸಿಗೆಯನ್ನು ಸಿದ್ಧಗೊಳಿಸಿಕೊಟ್ಟಿ ರಲು ಸೀತಾರಾಮರು, ಹಾಸಿಗೆಯಮೇಲೆ ಮಲಗಿದ್ದರು, ಹೊರಗಡೆಯಲ್ಲಿ ಲಕ್ಷ ಪಾನು ಆಯುಧ ಹಸ್ಮನಾಗಿ ಕಾವಲಿದ್ದನು. ಆಗ ಗುಹನು ಲಕ್ಷ ಟೌಸ್ವಾಮಿಯನ್ನು ಕುರಿತು -“ಪ್ರಭೋ ನಿಮಗೆ ಜಾಗರವಿರುವ ಅಭ್ಯಾಸವಿರಲಾರದು. ದಯವಿಟ್ಟು ಮಲಗಿಕೊಳ್ಳೋಣವಾಗಲ್ಲಿ ನಾನು ನಿಮ್ಮ ಕೆಲಸಮಾಡುವೆನು. ಎಚ್ಚರ ವಿದ್ದು ಕಾವಲುಗಾರನಾಗಿರುವೆನು' ಎಂದು ನುಡಿದನು, ಅದನ್ನು ಕೇಳ ಬಕ್ತ ಟಾರು

ರಾರ ಒರ. ಮರ peu ಕಾ ಲ್ಲ po le ಬಜ NM A rN EO ್ಯಾಾ್‌

*ನ ಸೀತಾ ತ್ವಯಾ ಹೀನಾ ಚಾಹಮಸಪಿ ರಾಘವ ನುಹೂರ್ತಮವಿ ಜೀವಾನೋ ಜಲಾನ್ಮತ್ಸ್ಯಾ ವಿಫೋದ್ಮ್ಯೃತೌ ನಹಿ ತಾತಂ ಶತ್ರುಫ್ನೆಂ ನಸುಮಿತ್ರಾಂ ಸರನ್ತೆಪ! ಪ್ರಷ್ಟುಮಿಚ್ಛ್ರೇಯ ಮದ್ಮಾಹಂ ಸ್ವರ್ಗಂ ಚಾಪಿ ತ್ವಯಾ ವಿನಾ

ಸೌಮಿತ್ರಿ ೨೭

* ಮಿತ್ರಾ ಗುಹಾ, ಏನೆಂದು ಹೇಳಿದೆ. ಸಾರ್ವಭೌಮನಾದ ದಶರಥ ನಂದನ ಶ್ರೀರಾಮನು ಧರ್ಮಪತ್ನಿ ಸೀತಾದೇವಿಯೊಂದಿಗೆ, ನೆಲದಮೇಲೆ ಮಲಗಿರುವಲ್ಲಿ ನನಗೆ ಹೇಗೆ ನಿದ್ರೆ ಬಂದೀತು? ನಾನು ಹೇಗೆ ತಾನೇ

ಸುಖವಾಗಿ ಮಲಗಿಕೊಳ್ಳ ಬಲ್ಲೆನು' ಎಂದು ನಿಟ್ಟುಸಿರಿಟ್ಟು ದುಃಖಿಸಿದನು. ಲಕ್ಷ್ಮ ಣನ ಶ್ರೀರಾಮ ಯು ಅಂಥದು!

ಚಿತ್ರಕೂಟದಲ್ಲಿ ಶ್ರೀರಾಮನು ವಾಸಿಸಿದ್ದಾಗೆ ಲಕ್ಷ್ಮಣನು ಸೀತಾ ರಾಮರಿಗೆ ಅನುಪಮ ಸೇವೆಮಾಡಿದನು. ಮಣ್ಣಿನ ಗೋಡೆಯನ್ನು ಚ್ಟ ಅದರಮೇಲೆ ಒಣಗಿದ ಮರದ ದೂಲಗಳನ್ನು ತಂದಿಟ್ಟು ಕಬ್ಬ ಬಿದಿರು ಗಳನ್ನು ತೆಂದು ಜೋಡಿಸಿ, ತರಗೆಲೆಗಳನ್ನು ತಂದು ಹೊದಿಸಿ ಒಂದು ಸಾಧಾ ರಣ ಮನೆಯನ್ನು ಸಿದ್ಧ ಗೊಳಿಸಿಟ್ಟನು. ಗುಡಿಸಿಲಿನಂತಿದ್ದ ಚಿಕ್ಕ ಮಕೆ ಯೊಳಗೆ ಶ್ರೀರಾಮನು BE 10026 ವೇಶಿಸಿ,- "ಲಕ್ಷ ನಾ, spel ಕಟ್ಟಿದ ಮನೆಯಲ್ಲಿ ವಾಸಿಸಲು, ನನಗೆ ಅಯೋಫ್ಯೆಯಲ್ಲಿದ. N ಅರ ಮನೆಯಲ್ಲಿ ವಾಸಿಸುವುದಕ್ಕಿಂತಲೂ ಹೆಚ್ಚು ಆನಂದವಾಗುತ್ತದೆ' ಮಡಿದು ಅವನಿಗೆ ಸಂತೋಷವನ್ನು ಂಟುಮಾಡಿದನು. ಲಕ್ಷ ಬಾನು ಗುದ್ದಳಿ ಸಿಕಾಸಿಗಳನ್ನು ಹಿಡಿದು ಕಾಡಿಗೆ ನಡೆದು ಕಂದಮೂಲಾದಿಗಳನ್ನು ತರುವನು ವಿವಿಧ ಫಲಗಳನ್ನೂ ಪುಷ್ಪಗೆಳನ್ನೂ ಜೀನುತುಪ್ಪೆವನ್ನೂ ತರುವನು. ಹೊ ಮಕ್ಕೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸುವನು. ಪ್ರಯಾಣ ಹೊರಟಾಗ್ಗೆ ಧನುರ್ಬಾಣ ಮುಂತಾದ ಆಯುಧಗಳನ್ನೂ ಸೀತಾದೇನಿಯ ವಸ್ತ್ರಾದಿಗಳ ಮೂಟಿಯನ್ನೂ ಹೊರುವನ್ನು ನೀರನ್ನು ಹೊತ್ತುತರುವನು. ಬೇಕೆಂದಲ್ಲಿ ಆಸೆ ನಾದಿಗಳನ್ನೂ ಹುಲ್ಲು ಮತ್ತು ಚೆಗುರುಗಳ ಹಾಸಿಗೆಯೆನ್ನೂ ಸಿದ್ಧ ಗೊಳಿಸುವನು. ರಾತ್ರೆಯುನ್ಲಿ ದುಷ್ಟವ ಮೃಗಗಳ ಬಾಥೆಯುಂಟಾಗದಂತೆ ಆಶ್ರ ನುಡ ಬಳಿ ಉರಿ ಕಾಕಿರಲು ಬೇಕಾದಷ್ಟು ಒಣಗಿದ ಕಟ್ಟಿ ಗೆಗಳನ್ನು ಜಬ ಹೊತ್ತು ತಂದು ಇಡುವನು. ಸನ 6 ರತಾ ತಚಿಗೆ ಮಲಗಿ ನಿದ್ದಿಸುತ್ತಿದ್ದಾಗ ಸಖಲ ಧರಿಸಿ ಅವರಿಗೆ ದುಷ ರಾಷ್ಟ್ರಸರೆ ಮತ್ತು ಕಾಡುಮೃ ಗಗಳ

POS ಬಾ ಬಾವಾ ಇ.

*ಕಥಂ ದಾಶರಥೌ ಭೂಮೌ ಶಯನೇ ಸಹ ಸೀತೆಯೂ |! ಪಕ್ಕಾ ನಿದ್ರಾ ಮಯಾ ಲಬ್ದಂ ಜೀವಿತಾನಿ ಸುಖಾನಿ ವಾಗ

3೮ ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

ಬಾಥೆಯುಂಟಾಗದಂತೆ ರಾತ್ರೆಯೆಲ್ಲಾ ಎಚ್ಚರವಾಗಿಯೇ ಇದ್ದು ಕಾದ. ಕೊಂಡಿರುವನು,

ಕೇವಲ ಪರಿಚಾರಕನಂತೆ ಕೆಲಸಗಳನ್ನು ಮಾಡುತ್ತಿದ್ದುದು ಮಾತ್ರವೇ ಆತನ ಕಾರ್ಯವಾಗಿರಲಿಲ್ಲ ವನಕ್ಕೆ ಕಾಲಿಟ್ಟೊಡನೆಯೇ ಅವ ರನ್ನು ಆಕ್ರಮಿಸಿದ ವಿರಾಧ ರಾಕ್ಷಸನನ್ನು ಶೀರಾಮನೊಂದಿಗೆ ಸೇರಿ ಸಂಹ ರಿಸುವಲ್ಲಿ ವಿಶೇಷ ಶೌರ್ಯಪ್ರತಾಪಗಳನ್ನು ಪ್ರಕಟಿಸಿದನು. ಮುಂದೆ ಒಂದಾ ನೊಂದು ದಿನ ಸೀತಾರಾಮರು ಮರದಡಿಯಲ್ಲಿಕುಳಿತು ಆಹಾರ ತೆಗೆದುಕೊಳ್ಳು. ಕ್ಲಿದ್ದಾಗ ದೂರದಲ್ಲಿ ಧೂಳೆದ್ದುದನ್ನು ನೋಡಿ ಅದೇನೋ ಎಂದು ಶಂಕಿಸಲು ಲಕ್ಷ್ಮಣನು ಒಡನೆ ಉನ್ನ ತವಾದ ಒಂದು ಮರವನ್ನೇರಿ ಸುತ್ತಲೂ ನೋಡಿ ಏನನ್ನೂ ಕಾಣದೆ, ಉತ್ತರದಿಕ್ಕಿ ನಡೆಗೆ ನೋಡಲು, ಅಲ್ಲಿ ಅನೇಕ ಆನೆಗಳೂ, ಕುದುರೆಗಳೂ, ರಥ ಪದಾತಿಗಳೂ ವಿಶೇಷ ಕೋಲಾಹಲ ಮಾಡುತ್ತಾ ಬರು ತ್ಲಿದ್ದುವನ್ನು ಕಂಡು, ಆದು ಭರತನ ಸೇನೆಯೇ ಇರಬಹುದೆಂದು ತರ್ಕಿಸಿ, ಶ್ರೀರಾಮನನ್ನು ಕುರಿತು, -"ಅಣ್ಣ್ವಾ ಇದಕ್ಕಿನ್ನು ಸಂದೇಹವಿಲ್ಲ. ಆದು ನೀಚಳಾದ ಕೈಕೇಯಿಯ ಮಗನ ಸೇನೆಯೇ ಎನ್ನಲು ಅಡ್ಡಿಯಿಲ್ಲ. ಅವನು ಅನಾಯಾಸವಾಗಿ ತನಗೆ ದೊರೆತ ರಾಜ್ಯವನ್ನು ನಿಷ್ಠಂಟಕವಾದುದನ್ನಾಗಿ ಮಾಡಿಕೊಳ್ಳಲೋಸುಗ ಕಾಡಿನಲ್ಲಿ ಏಕಾಂಗಿಯಾಗಿ ಅಲೆಯುತ್ತಿರುವ ನಿನ್ನನ್ನು ಹುಡುಕಿ ಸಂಹರಿಸಬೇಕೆಂದು ಬರುತ್ತಿರುವನೆಂದೇ ನನಗೆ ತೋ ರುತ್ತಿರುವುದು. ಆಹಾ, ಇಂತಹ ದುಷ್ಟಾಲೋಚನೆಯುಳ್ಳ ಅವನು ಮಠಾ ಪಾಪಿಯ್ಲ್ಲವೆ? ಅವನು ಸಮಿಸಾಪಕ್ಕೆ ಬಂದು ನನ್ನ ಕೈಗೆ ಸಿಕ್ಕಿದನೆಂದರೆ, ಅವನನ್ನು ಕೊಲ್ಲದೆ ಬಿಡುನೆನೇ! ಅಂತಹ ದುರಾಶಾಗ್ರಸ್ತನನ್ನು ಕೊಂದು ದರಿಂದ ಯಾವ ಪಾಪವೂ ಬರಲಾರದು. ಬಹು ದಿನಗಳಿಂದ ನನ್ನ ಆಯು ಧಗಳಿಗೂ, ಶಸ್ತ್ರಾಸ್ತ್ರಗಳಿಗೂ ತಕ್ಕ ಆಹಾರವಿಲ್ಲದೆ ಅವು ಹಸಿದಿವೆ, ದಿನ ಭ್ರಾತೃದ್ರೋಹಿಯಾದ ಭರತನನ್ನೂ ಅವನ ಸೈನ್ಯವನ್ನೂ ಅವುಗಳಿಗೆ ಆಹುತಿಯನ್ನಾಗಿಸುವೆನು' ಎಂದು ಕಟಕಟನೆ ಹೆಲ್ಲಡಿದು ಗರ್ಜಿಸುತ್ತಿ

ದನು. ಆಗ ರಾಮಚಂದ್ರನು ಅವನನ್ನು ಕುರಿತು -" ತಮ್ಮಾ ಲಕ್ಷ್ಮಣಾ,

ಕೋಪಮಾಡೆಬೇಡೆ. ಭರತನು ಕೈಕೇಯಿಯ ತುಗನೇ ಆದರೂ ಅವನನ್ನು

5] ಸೌಮಿತ್ರಿ ೨೯

ಅಂತಹ ನೀಚನೆಂದು ಎಣಿಸಬೇಡ. ಮಹಾಪ್ರಾಜ್ಞನಾದ ಭರತನು ಊರಿಗೆ ಬಂದ ತರುವಾಯ ತನ್ನ ತಾಯಿಯಿಂದ ಇಂತಹ ಅನರ್ಧಕಾರ್ಯವು ನಡೆದು ಹೋದುದನ್ನು ಕಂಡು ಪರಿತಾಪಪಟ್ಟು ನಮ್ಮನ್ನು ಹಿಂದಿರುಗಿ ಕರೆದೊಯ್ಯ ಲಿಕ್ಟಾಗಿ ಬರುಪ್ತಿರುವನೆಂಬುದರಲ್ಲಿ ಸಂದೇಹವಿಲ್ಲ. ಅವನಲ್ಲಿ ಪಾಪಯೋ ಚನೆಯನ್ನು ಮಾಡುವುದು ಉಚಿತವಲ್ಲ. ಅವನು ಸಜ್ಜನನು, ವಿಚಾರವಿಲ್ಲದೆ ಅವನನ್ನು ಫಾತಿಸಿದಲ್ಲಿ ನಾವು ವಿಶೇಷ ಲೋಕಾಪವಾದಕ್ಕೆ ಗುರಿಯಾಗ ಬೇಕಾದೀತು' ಎಂದು ಎಚ್ಚರಿಸಿ ಸಮಾಧಾನಗೊಳಿಸಿದನು. ಹೀಗೆ ಲಕ್ಷ್ಮ ಇನು ಶ್ರೀರಾಮನಲ್ಲಿ ತನಗಿದ್ದ ಭಕ್ತ್ಮ್ಯತಿಶಯದಿಂದ ಕೆಲವುವೇಳೆ ಬಹು ಮಾಗಿ ದುಡುಕಿ ಬಿಡುತ್ತಿ ದ್ದನಾದರೂ, ಕೊನೆಯಲ್ಲಿ ತನ್ನ ಅಭಿಪ್ರಾಯವು ತಪ್ಪೆಂದು ತಿಳಿದಮೇಲೆ ಪಶ್ಚಾತ್ತಾಪಗೊಂಡು ತನ್ನ ಲೋಪವನ್ನು ತಿದ್ದಿ ಕೊಳ್ಳುವನು. ಅರಣ್ಯವಾಸದಲ್ಲಿ ಮುಂದೆ ಶೂರ್ಪನಖಾಪ್ರಸಂಗದಲ್ಲಿ ಲಕ್ಷ್ಮಣನು ಶೀರಾಮನ ಅಭಿಪ್ರಾಯವನ್ನು ಗ್ರಹಿಸಿ, ದುಷ್ಟಸ್ತೀಯ ಕೆವಿ ಮೂಗುಗ ಳನ್ನು ಕೊಯ್ದು ಆಟ್ಬಿದುದೇ, ಮುಂದಿನ ರಾಮಾಯಣ ಕದೆಗೆ ಬೀಜರೂಪೆ ವಾಗಿ ಪರಿಣಮಿಸಿತ್ತು ಶೂರ್ಪನೆಖಾನಾಶಿಕಾಚ್ಛೇದನೆ ಕಾರ್ಯವಾಗದಿದ್ದಲ್ಲಿ ಶ್ರೀರಾಮಾದಿಗಳು ಆವರೆಗೆ ಕಳೆದಂತೆಯೇ ಹದಿನಾಲ್ಕು ವರ್ಷಗಳಲ್ಲಿ ಮಿಕ್ಕ ಇಲಾವಧಿಯನ್ನೂ ಹಾಗೆಯೇ ಕಳೆದು ತರುವಾಯ ಆಯೋಧ್ಯೆಗೆ ಹಿಂದಿರು ಗಬಹುದಿತ್ತು. ಆದರೆ ಶೂರ್ಪನಖೆಯಿಂದ ಬೆಳೆದ ಪ್ರಸಂಗವು ಖರದೂಷ ಕಾದಿಗಳ ಹದಿನಾಲ್ಕು ಸಹಸ್ರ ಸೈನ್ಯದೊಂದಿಗೆ ಶ್ರೀರಾಮನಿಗೆ ಭಯಂಕರ ಯುದ್ಧ ಘಟನೆಯನ್ನು ತಂದಿಟ್ಟಿತು. ರಾಮನು ಅದಕ್ಕೆ ಚಿಂತಿಸದೆ, ಲಕ್ಷ್ಮಣ ನಿಗೆ ಸೀತೆಯನ್ನು ಸಮಾಪದ ಗಿರಿಗುಹೆಯೊಳಕ್ಕೆ ಕರೆದೊಯ್ದು ಸುರಕ್ಷಿತ ವಾಗಿ ನೋಡಿಕೊಂಡಿರಲು ಹೇಳಿ, ತಾನು ದೊಡ್ಡ ಸೈನ್ಯದೊಂದಿಗೆ ಹೋ ರಾಡಿ ಜಯಿಸಿದನು. ಶಾನು ಹುರಿದುಂಬಿಸಿ ಕರೆತಂದಿದ್ದ ಖರದೂಷಣಾದಿಗಳ ಭಯಂಕರ ಸೈನ್ಯವು ನಿರ್ನಾಮವಾದುದು ಶೂರ್ಷನಖೆಗೆ ಮಹಾಭಯವನ್ನುಟಿಮಾ ಡಿತ್ತು ಅವಳು ಲಂಕೆಗೆ ಓಡಿ, ತಮ್ಮಣ್ಣ ನಾದ ರಾವಣನಲ್ಲಿ ತನ್ನ ಅವಸ್ಥೆ ಯನ್ನು ದೂರಿಕೊಂಡು, ಲೋಕೋತ್ತರ ಸುಂದರಿಯಾದ ಸೀತೆಯನ್ನು

ಪಂ ಸುಬೋಧ ಕುಸುಮಾಂಜಲಿ ಗ್ರಂಥಮಾಲಾ

ಹೆರಿಸುವಂತೆ ಅವನಿಗೆ ಪೆ ಪ್ರೇರಿಸಿ ಅವನನ್ನು ಜನಸ್ಸಾ ನಕ್ಕೆ ಕರೆಶಂದಳು, ... ಮಾಯಾವಿಯಾದ ಮಾರೀ ಚನನ್ನು ಕಾಂಡನಷ್ಟು ಗವನ್ನಾ ಗಿಸಿ ಕರೆತಂದು ಮೃಗದ ಸಹಾಯದಿಂದ ಸೀತೆಯ ಬಳಿಯಿಂದ ಲಕ್ಷ್ಮ ಣರನ್ನು ಅಗಲಿಸಿ ಅವಳನ್ನು ಹೊತೊ ನ್ಮ ಯ್ಯಲು ಯೋಚಿಸಿದನು ಅವನು ಯೋಜನಿದಂತೆಯೆ 2 ಆಯಿತ್ನುಸೀತೆಯು ತನ್ನ ಕಣ್ಣಿ ಗೆ ಬೆಲುವಾಗಿ ಸುಳಿದ ಆಶ್ಮ ರ್ಯೇಕರವಾದ ಮಾಯಾಮೃ ಗವನ್ನು ನೋಡಿ ಮೋಹಿಸಿ ಅದನ್ನು ತವರದ ಶೀರಾವ ಮನಸನ್ನು ಜಟ ರಾಮನು ತನ್ನಾ ಬಯ ಪತ್ನಿಯ ಇಚ್ಛೆಯನ್ನು ನೆರೆವೆ*ರಿಸಲ ಧನರ್ಬಾಣಧಾರಿಯಾಗಿ ಹೊರಡ ಲುದ್ಯುಕ್ಕನಾದನು. ಆಗ ಲಕ್ಷ ನು, ಟ್ಟ ಅಣ್ಣ ಯ್ಯಾ, ಇದು ನಿಜವಾದ ಮೃಗವಲ್ಲ. ರಾಕ್ಷಸರ ಮಾಯೆ ಯ; ದು, ನಾವು ಬಹು ಜನ ರಾಕ ಸರನ್ನು ಘಾತಿಸಿರುವುದರಿಂದ ಅವರು ಬಗೆ ಬಗೆಯ ರೂಪಗಳಿಂದ ನಮ್ಮನ್ನ ಮೋಸ ಸಿ ಹಿಂಸಿಸಲು ಕೂಂಡುಹಾಕುತ್ತಿರುವರು, ಮೃಗವೂ ನಮ್ಮನ್ನು ವಂಚಿಸಲು ಏರ್ಸಟ್ಬೈ ಒಂದು ಸಾಧನವೆಂದು ತಿಳಿ ಇವನನ್ನು ಅನುಸರಿಸಿ ಹೋಗುವುದು SO 20೫ ಎಂದ. ವಿಜ್ಞಾನಿಸಿ ಎಚ್ಚರಿ

ರುವನನು ರಾಶ ಕಸನೇ ಅಂತಹ ದು ನನ್ನು ವಧಿನ ದರಿಂದ ನೀನು ಸೀತೆಯನ್ನು ಚಂಗ ನಾನಿನ್ನು ಸ್ವಲ್ಪ ) ಹೊತ್ತಿನಲ್ಲೆ ಆಮ ಗವನ್ನು ಹಿಡಿದು ತರುವೆನು; ಇಲ್ಲನೆ a ನ್‌ ಹುಡುಗನ ಹೊರಟನು, ಅದು ಚಿನ್ನದ ಬಿಂಕೆ ಘೆ ಲು ಬಂದಿದ್ದ ಮಾಯಾಮೃಗವೇ ಆಗಿ Re ಉಪಾಯ.ದಿಂದ ಬಹೆ. ದೂರಕ್ಕೆ ಕರೆದೊಯ್ದಿತು. ರಾವನು ಬೇಸತ್ತು ಬಾಣಪ್ರಯೋಗ ಮಾಡಿಡೊಡನೆಯೆ "ಹಾ ಸೀತ, ಹಾ ಲಕ ಕ್ಷ > ಎಂದು ಅಂಟಿಕೊಂಡ. ಪಾ ಬಿಟ್ಟಿತು, ಅದನ್ನು ಫೇಳ್ಲ ರಾಮನು ಅದರಿಂದ ಏನು ಪ್ರಮಾದವಾಗುವುದೋ, ಸೀತೆಯು ಬೆದರಿ ಲಕ್ಷ್ಮ

ವುದೂ ನಮ್ಮ ಕರ್ತವ್ಯವೇ ಅಲ್ಲವೆ? ಆದು ರೂ ಜೀ ನೋಡಿಕೊಂಡಿತು,

2 C> Ly < ಗೊ PRS ಭಿ ಬ್ರ O é 2 (5

ಸೌಮಿತ್ರಿ ಪ್ಲಿ೧ಿ

ಣನನ್ನೆಲ್ಲಿ ಕಳುಹಿಸಿಬಿಡುವಳೋ ಎಂದು ಶಂಕಿಸಿ, ಆದೆರ ಚರ್ಮವನ್ನು ತೆಗೆದುಕೊಂಡು ಆತುರದಿಂದ ಹಿಂದಿರುಗಿ ಬರುತ್ತಿದ್ದನು.

ಲಕ್ಷ ಜೀವಮಾನದಲ್ಲೇ ಶಿೀರಾಮನ ಆಜ್ಞೆಯನ್ನು ಮಾರಿದೆ ಸಂದರ್ಭವೆಂದರೆ ಇದೊಂದೇ!"ಹಾ ಸೀತ ಹಾ ಲಕ್ಷ ಳವಿಂಬ ಕೂಗನ್ನು ಕೇಳಿದೊಡನೆಯೇ, ಅದು ಶೀರಾಮನ ಧ್ವನಿಯೇ ಎಂದೂ, ರಾಮನಿಗೇನೋ ಆಪತ್ತುಂಬಾಗಿದೆಯೆಂದೂ, ತಿಳಿದು ಸೀತೆಯು-“ಲಕ್ಷ ಟೌ: ಒಡೆನೆ ಹೊರಟಿ ಶ್ರೀರಾಮನನ್ನು ಕರೆದುತಾರೆಂದು ಬಲವಂತಪೆಡಿಸಿದಳು, ಅದು ಲಕ್ಷ ನಿಗೆ ಬಹು ಸಂಕಟದ ವೇಳೆಯಾಗಿ ಪರಿಣಮಿಸಿತ್ತು ಏನುಮಾಡಲೂ ತೋರದು. ಶ್ರೀರಾಮನಿಗೆ ಏನಪಾಯವೂ ಉಂಬಾಗಿರಲಾರದೆಂದು ಅವನಿಗೆ ದೃಢನಂಬಿ ಕೆಯಿದ್ದಿತು. "ತಾಯೇ, ಬೆದರದಿರು, ಇದು ರಾಮನ ಧ್ವನಿಯಲ್ಲಿ ಮಾಯಾ ವಿಗಳಾದ ರಾಕ್ಷಸರ ಮಾಯೆಯಿದು, ರಾಮನನ್ನು ಜಯಿಸಿ, ಹೀಗೆ ಅಪಾ ಯಕ್ಕೆ ಗುರಿಮಾಡೆಬಲ್ಲ ಧೀರನು ಲೋಕದಲ್ಲಿ ಯಾವನಿರುವನು?' ಎಂದು ಮುಂತಾಗಿ ಎಷ್ಟ ಹೇಳಿದರೂ,ಆ ಗಮನವೇ ಇಲ್ಲದೆ, ಸೀತೆಯು ಲಕ್ಷ್ಮ ಣನ ನ್ನು ಮನಬಂಡಂತೆ ನಿಂದಿಸತೊಡೆಗಿದಳು- ಎಲೋ ಲಕ್ಷ ಣ್ರಾನಿನ್ನ ಅಣ್ಣ ನ. ಪ್ರಾಣಾಪಾಯವೊದಗಿ ಕೂಗಿಕೊಳ್ಳುತ್ತಿದ್ದರೂ, ನೀನು ಲಕ್ಷ್ಯವೇ ಇಲ್ಲದೆ ಇಲ್ಲೇ ನಿಂತಿರುವುದನ್ನು ನೋಡಿದರೆ, ನೀನು ಶತ್ರುಪಕ್ಷದವನೆಂದು